ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಾಡಾದಲ್ಲಿ ಖಲಿಸ್ತಾನಿಯರ ಜೊತೆ ಕೈ ಜೋಡಿಸಿ ಎಗರಾಡುತ್ತಿದ್ದ ಜಸ್ಟೀನ್ ಟ್ರುಡೋ ಯುಗಾಂತ್ಯವಾಗಿದೆ. ಆಡಳಿತದ ಹೊಸ ಅಲೆ ಶುರುವಾಗಿದೆ.
ಕೆನಡಾದಲ್ಲಿ ಹಿಂದು ದೇವಾಲಯಗಳ ಮೇಲೆ ದಾಳಿ, ಖಲಿಸ್ತಾನಿಯರ ಜೊತೆ ಶಾಮೀಲಾಗಿ ಭಾರತದ ವಿರೋಧಿಯಾಗಿ ಕೆನಡಾ ಬದಲಾಗಿತ್ತು. ಇದೀಗ ಕೆನಡಾ ಪ್ರಧಾನಿ ಪಟ್ಟಕ್ಕೆ ಸಮರ್ಥ ನಾಯಕನ ಆಯ್ಕೆಯಾಗಿದೆ. ಕೆನಡಾ ಪ್ರಧಾನಿ ಪಟ್ಟಕ್ಕೆ ಮಾರ್ಕ್ ಕಾರ್ನಿ ಆಯ್ಕೆಯಾಗಿದ್ದಾರೆ.
ಲಿಬರಲ್ ಪಕ್ಷದ ನಾಯಕ, 59 ವರ್ಷದ ಮಾರ್ಕ್ ಕಾರ್ನಿ ಆಯ್ಕೆಯಾಗಿದ್ದಾರೆ. ಲಿಬರಲ್ ಪಕ್ಷದ ಸಂಸದರು ಅಪಾರ ಪ್ರಮಾಣದಲ್ಲಿ ಮತ ಚಲಾಯಿಸಿ ಕಾರ್ನಿಯನ್ನ ಪಟ್ಟಕ್ಕೇರಿಸಿದ್ದಾರೆ.
ಶೇ 85.9 ಪ್ರತಿಶತ ಮತಗಳ ಮೂಲಕ ಕಾರ್ನಿ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಂದ್ಹಾಗೆ ಮಾರ್ಕ್ ಕಾರ್ನಿ ಬ್ಯಾಂಕ್ ಆಫ್ ಕೆನಡಾದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಣಕಾಸು ಬಿಕ್ಕಟ್ಟುಗಳನ್ನು ಎದುರಿಸಲು ಕಾರ್ನಿಗೆ ಅಪಾರ ಅನುಭವವಿದೆ. 2008ರಲ್ಲಿ ಎದುರಾಗಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಕೆನಡಾ ಬೇಗ ಚೇತರಿಸಿಕೊಳ್ಳಲು ಕಾರ್ನಿಯೇ ಕಾರಣವಾಗಿದ್ದರು.
ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದುವ ಹಂಬಲ
ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆ ಮಾರ್ಕ್ ಕಾರ್ನಿ ಹಲವು ದಿಟ್ಟ ನಿಲುವುಗಳನ್ನ ಕೈಗೊಂಡಿದ್ದಾರೆ. ಕೆನಡಾವನ್ನ ಅಮೆರಿಕಾಕ್ಕೆ ಸೇರಿಸಿಕೊಳ್ಳುತ್ತೇವೆ ಎನ್ನುತ್ತಿದ್ದ ಡೊನಾಲ್ಡ್ ಟ್ರಂಪ್ಗೆ ತಿರುಗೇಟು ಕೊಟ್ಟಿದ್ದಾರೆ. ಕೆನಡಾ ಮೇಲೆ ಸುಂಕ ಸಮರ ಸಾರಿದ್ದ ವಿಶ್ವದ ದೊಡ್ಡಣ್ಣನಿಗೆ ಪ್ರತಿ ಸುಂಕದ ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತ ಭಾರತದೊಂದಿಗೆ ಹದಗೆಟ್ಟಿರೋ ಸಂಬಂಧವನ್ನ ಸುಧಾರಣೆ ಮಾಡುವ ಮಾತನ್ನಾಡಿದ್ದಾರೆ.
ಇದೇ ವರ್ಷ ಅಕ್ಟೋಬರ್ ವೇಳೆಗೆ ಕೆನಡಾದಲ್ಲಿ ಚುನಾವಣೆ ಎದುರಾಗಲಿದೆ. ಅಷ್ಟರಲ್ಲಿ ಹಲವು ಸವಾಲುಗಳನ್ನು ಮಾರ್ಕ್ ಕಾರ್ನಿ ಮೆಟ್ಟಿ ನಿಲ್ಲಬೇಕಿದೆ. ಜೊತೆಗೆ ಭಾರತದ ಜೊತೆ ಇನ್ಮೇಲೆ ಕೆನಡಾ ಸಂಬಂಧ ಹೇಗಿರಲಿದೆ ಎಂಬ ಕೌತುಕ ಹೆಚ್ಚಾಗಿದೆ.