ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಎಂಗೇಜ್‌ಮೆಂಟ್ ಸುದ್ದಿ ಬೆನ್ನಲ್ಲೇ ಇದೀಗ ಮತ್ತೆ ಈ ಜೋಡಿ ವಿಯೆಟ್ನಾಂನಲ್ಲಿ ಕಾಣಿಸಿಕೊಂಡಿದೆ.
ಫೆಬ್ರವರಿಯಲ್ಲಿ ಎಂಗೇಜ್‌ಮೆಂಟ್ ಎಂದು ಹೇಳಲಾಗುತ್ತಿರುವುದಕ್ಕೂ ಮತ್ತೆ ಜೋಡಿ ಟ್ರಿಪ್ ಮಾಡ್ತಿರುವುದಕ್ಕೂ ಅಭಿಮಾನಿಗಳು ಟ್ಯಾಲಿ ಮಾಡಿ ಖುಷಿ ಪಟ್ಟಿದ್ದಾರೆ.
ಈ ಹಿಂದೆಯೂ ಸಾಕಷ್ಟು ಬಾರಿ ವಿಜಯ್ ರಶ್ಮಿಕಾ ಒಟ್ಟಿಗೇ ಟ್ರಾವೆಲ್ ಮಾಡಿದ್ದರೂ ಎಂದಿಗೂ ಒಟ್ಟಿಗೇ ಇರುವ ಫೋಟೊಗಳನ್ನು ಪೋಸ್ಟ್ ಮಾಡಿಲ್ಲ. ಬೇರೆ ಬೇರೆ ಫೋಟೊಗಳನ್ನು ಪೋಸ್ಟ್ ಮಾಡಿದ್ದರೂ ಅಭಿಮಾನಿಗಳು ಇಬ್ಬರೂ ಒಟ್ಟಿಗೇ ಇದ್ದಾರೆ ಎನ್ನುವ ವಿಷಯವನ್ನು ಪದೇ ಪದೆ ಪ್ರೂವ್ ಮಾಡಿದ್ದಾರೆ.
ಈ ಬಾರಿಯೂ ಜೋಡಿ ವಿಯೆಟ್ನಾಂಗೆ ಹಾರಿದ್ದು, ಇಬ್ಬರೂ ಬೇರೆ ಬೇರೆ ಸಮಯದಲ್ಲಿ ಫೋಟೊಸ್ ಪೋಸ್ಟ್ ಮಾಡಿದ್ದಾರೆ. ಇವರ ಎಂಗೇಜ್‌ಮೆಂಟ್ ವಿಷಯ ಕೂಡ ನಿಜವೋ ಅಥವಾ ಬರೀ ಗಾಸಿಪ್ಪಾ? ಅವರೇ ಉತ್ತರ ನೀಡಬೇಕಿದೆ..