ಬಾಕ್ಸರ್ ಮೇರಿ ಕೋಮ್​ಗೆ ಇಂಗ್ಲೆಂಡ್​ನ ‘ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್’ ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಿಳಾ ಬಾಕ್ಸಿಂಗ್ಸ್​​ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕ ತಂದು ಕೊಟ್ಟಿರುವ ಮೇರಿ ಕೋಮ್ (Mary Kom ) ಅವರಿಗೆ ಆಗ್ನೇಯ ಇಂಗ್ಲೆಂಡ್​ನ ವಿಂಡ್ಸರ್​​ನಲ್ಲಿ ಯುಕೆ-ಇಂಡಿಯಾ ಪ್ರಶಸ್ತಿ ಸಮಾರಂಭದಲ್ಲಿ ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್ (Global Indian Icon of the Year) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜೂನ್ 29 ರಂದು ಈ ಸಮಾರಂಭ ನಡೆದಿದ್ದು, ಮೇರಿ ಕೋಮ್​ ಅವರು ಬ್ರಿಟನ್​ನ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಈ ವೇಳೆ 4ತಮ್ಮ 20 ವರ್ಷಗಳ ಕಠಿಣ ಪರಿಶ್ರಮ ಮತ್ತು ಬಾಕ್ಸಿಂಗ್ಸ್​ ಜೀವನದ ಕುರಿತು ಮಾತನಾಡಿದ ಅವರು, ನಾನು 20 ವರ್ಷಗಳಿಂದ ಬಾಕ್ಸಿಂಗ್​ ರಿಂಗ್​ನಲ್ಲಿ ಹೋರಾಡುತ್ತಿದ್ದೇನೆ. ನನ್ನ ಜೀವನದಲ್ಲಿ, ಬಾಕ್ಸಿಂಗ್​​ಗಾಗಿ ಸಾಕಷ್ಟು ಪ್ರಯತ್ನ, ಕಠಿಣ ಪರಿಶ್ರಮವನ್ನು ಹಾಕಿದ್ದೇನೆ. ನನ್ನ ದೇಶಕ್ಕಾಗಿ, ನನ್ನ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಿದ್ದೇನೆ. ಈ ಮಾನ್ಯತೆಗಾಗಿ ನಾನು ನನ್ನ ಹೃದಯಾಂತರಾಳದಿಂದ ನಿಜವಾಗಿಯೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಯುಕೆ-ಇಂಡಿಯಾ ವೀಕ್ ಅಂಗವಾಗಿ ಐಜಿಎಫ್ (ಇಂಡಿಯಾ ಗ್ಲೋಬಲ್ ಫೋರಂ) ಈ ಪ್ರಶಸ್ತಿ ಸಮಾರಂಭ ಆಯೋಜಿಸಿತ್ತು. ಅದರಲ್ಲಿ ಆಸ್ಕರ್ ನಾಮನಿರ್ದೇಶನಗೊಂಡ ‘ಎಲಿಜಬೆತ್: ದಿ ಗೋಲ್ಡನ್ ಏಜ್’ ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಅವರು ಎರಡೂ ದೇಶಗಳಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!