ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಅನ್ಯ ರಾಜ್ಯದ ಬೋಟ್‌ಗಳಿಗೆ ವಾಪಸ್ಸಾಗಲು ಕೇರಳ, ಜೂನ್ 9ರ ಮಧ್ಯರಾತ್ರಿಯ ಗಡುವು ನೀಡಿದೆ.
ರಾಜ್ಯದಲ್ಲಿ ಜೂ.9ರ ಮಧ್ಯರಾತ್ರಿಯ ಬಳಿಕ ಜು.31ರ ತನಕ ಈ ವರ್ಷದ ಟ್ರೋಲಿಂಗ್ ನಿಷೇಧ ಜಾರಿಯಲ್ಲಿದ್ದು, ಈ ವೇಳೆಯ ಯಾವುದೇ ಮೀನುಗಾರಿಕೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿರುವ ತರೆ ರಾಜ್ಯಗಳ ಯಾಂತ್ರೀಕೃತ ದೋಣಿಗಳು ಜೂ.9ರ ಮಧ್ಯರಾತ್ರಿಯ ಮೊದಲು ಕೇರಳ ಕರಾವಳಿಯನ್ನು ತೊರೆಯಬೇಕು ಎಂದು ನಿರ್ದೇಶನ ನೀಡಲಾಗಿದೆ.
ಟೋಲಿಂಗ್ ನಿಷೇಧದ ಅವಧಿಯಲ್ಲಿ, ಕರಾವಳಿ ಪ್ರದೇಶಗಳು, ಬಂದರುಗಳ ಪೆಟ್ರೋಲ್ ಬಂಕ್‌ಗಳು ಯಾಂತ್ರೀಕೃತ ದೋಣಿಗಳಿಗೆ ಇಂಧನ ಒದಗಿಸುವಂತಿಲ್ಲ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.