Sunday, January 11, 2026

ಡೈಲಾಗ್ ಸಾಕು, ಡೇಟ್ ಫಿಕ್ಸ್ ಮಾಡಿ: ಕುಮಾರಸ್ವಾಮಿಗೆ ಡಿಕೆಶಿ ಬಹಿರಂಗ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನರೇಗಾ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದ ಎಚ್‌ಡಿಕೆ ಸವಾಲಿಗೆ ತಿರುಗೇಟು ನೀಡಿರುವ ಡಿ.ಕೆ. ಶಿವಕುಮಾರ್, “ನಾನು ಇಂದೇ ಚರ್ಚೆಗೆ ಸಿದ್ಧ” ಎಂದು ಗುಡುಗಿದ್ದಾರೆ.

ಟಿವಿ ಮಾಧ್ಯಮ, ಸಾರ್ವಜನಿಕ ವೇದಿಕೆ ಅಥವಾ ವಿಧಾನಸಭೆ, ಎಲ್ಲಿ ಬೇಕಿದ್ದರೂ ಚರ್ಚೆಗೆ ಬರಲು ಸಿದ್ಧ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

“ಮನರೇಗಾ ಮಾಹಿತಿ ನನ್ನ ಬೆರಳ ತುದಿಯಲ್ಲಿದೆ, ನನಗೆ ಯಾವುದೇ ವಿಶೇಷ ಸಿದ್ಧತೆಯ ಅಗತ್ಯವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲೇ ನರೇಗಾ ಯೋಜನೆಯಲ್ಲಿ ಕನಕಪುರ ತಾಲ್ಲೂಕು ನಂಬರ್ ಒನ್ ಸ್ಥಾನ ಪಡೆದಿರುವುದನ್ನು ನೆನಪಿಸಿದ ಅವರು, ಕೇಂದ್ರದ ತನಿಖೆ ಎದುರಿಸಲು ಸಹ ಸಿದ್ಧ ಎಂದಿದ್ದಾರೆ.

ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳುತ್ತಲೇ, ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ವ್ಯಂಗ್ಯವಾಡಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!