ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತಷ್ಟು ತ್ರೀವತೆ ಪಡೆಯುತ್ತಿದ್ದು, ಇರಾನ್ ಗೆ ಅಮೆರಿಕ ನೀಡಿದ್ದ ಗಡುವು ಕೊನೆಯಾಗುತ್ತಾ ಬಂದಿದ್ದು, ಇದರ ಬೆನ್ನಲ್ಲೇ ಇಡೀ ಇರಾನ್ ನಾಗರಿಕತೆ ಸರ್ವನಾಶ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಶಪಥ ಮಾಡಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಟೆಹ್ರಾನ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಗದಿಪಡಿಸಿದ ಗಡುವಿಗೆ ಕೆಲವೇ ಗಂಟೆಗಳ ಬಾಕಿ ಉಳಿದಿದ್ದು, ಇತ್ತ ಅಧಿಕೃತ ಟ್ರೂತ್ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇಂದು ರಾತ್ರಿ ಇಡೀ ನಾಗರಿಕತೆಯೊಂದು ಸರ್ವನಾಶವಾಗಲಿದೆ. ಮತ್ತೆಂದೂ ಈ ನಾಗರಿಕತೆ ಹಿಂತಿರುವುದಿಲ್ಲ. ನಾನು ನಿಜವಾಗಿಯೂ ಈ ನಾಗರಿಕತೆ ನಾಶವಾಗಲಿ ಎಂದು ಬಯಸುವುದಿಲ್ಲ. ಅದು ಸಂಭವಿಸಲಿದೆ ಎಂದು ಹೇಳಿದ್ದಾರೆ.
ಮುಂದುವರೆದು, ನಾವು ಸಂಪೂರ್ಣ ಆಡಳಿತದ ಬದಲಾವಣೆಯನ್ನು ಬಯಸುತ್ತೇವೆ. ಅಲ್ಲಿ ಕ್ರಾಂತಿಕಾರಿಯಾಗಿ ಅದ್ಭುತವಾದ ಏನಾದರೂ ಸಂಭವಿಸಬಹುದು ಎಂದು ನಿರೀಕ್ಷಿಸುತ್ತಿದ್ದೇನೆ. ಇಂದು ರಾತ್ರಿ 47 ವರ್ಷಗಳ ಭ್ರಷ್ಟಾಚಾರ ಮತ್ತು ಕ್ರೂರ ಆಡಳಿತ ಕೊನೆಗೊಳ್ಳುತ್ತದೆ. ದೇವರು ಇರಾನ್ನ ಜನರನ್ನು ಆಶೀರ್ವದಿಸಲಿ ಎಂದು ಟ್ರಂಪ್ ಬರೆದಿದ್ದಾರೆ .
ಕದನ ವಿರಾಮಕ್ಕೆ ಸಾಥ್ ನೀಡದೆ ಇದ್ದಾರೆ ಇರಾನ್ನ ವಿದ್ಯುತ್ ಉತ್ಪಾದನಾ ಸ್ಥಾವರಗಳು ಮತ್ತು ಸೇತುವೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು ಎಂದು ಟ್ರಂಪ್ ಎಚ್ಚರಿಸಿದ್ದರು.



