September 29, 2026
Tuesday, September 29, 2026
spot_img

ಟ್ರಂಪ್ ನಿಗೂಢ ನಡೆ: ಇರಾನ್ ಡೆಡ್ ಲೈನ್ ನಡುವೆ ಅಮೆರಿಕದ ಭಾರತೀಯ ರಾಯಭಾರಿಯನ್ನು ಕರೆಸಿಕೊಂಡ ದೊಡ್ಡಣ್ಣ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕಕ್ಕೇರಿದ್ದು, ಇರಾನ್ ಗೆ ಅಮೆರಿಕ ನೀಡಿದ್ದ ಕದನ ವಿರಾಮದ ಡೆಡ್ ಲೈನ್ ಹತ್ತಿರವಾಗುತ್ತಿದ್ದು, ಇದರ ಬೆನ್ನಲ್ಲೇ ಟ್ರಂಪ್ ಅಮೆರಿಕದ ಭಾರತೀಯ ರಾಯಭಾರಿಯನ್ನು ಶ್ವೇತಭವನಕ್ಕೆ ಕರೆಸಿಕೊಂಡಿದ್ದಾರೆ.

ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಿ ಕದನ ವಿರಾಮದ ಕುರಿತು ಮಾತುಕತೆಗೆ ಟ್ರಂಪ್ ನೀಡಿದ್ದ ಗಡುವು ಕೊನೆಯಾಗಲು ಇನ್ನೂ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಇದರ ಬೆನ್ನಲ್ಲೇ ಕದನ ವಿರಾಮಕ್ಕೆ ಒಪ್ಪದೇ ಹೊದ್ದಲ್ಲಿ ಭೀಕರ ದಾಳಿಯ ಎಚ್ಚರಿಕೆ ನೀಡಿದ್ದಾರೆ.

ಈ ಎಲ್ಲದರ ನಡುವೆ ಟ್ರಂಪ್ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಸರ್ಜಿಯೋ ಗೋರ್ ಅವರನ್ನು ಶ್ವೇತಭವನದ ವಿಶೇಷ ಭೋಜನಕೂಟಕ್ಕೆ ಆಹ್ವಾನಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ ಭಾರತದ ಮಧ್ಯಸ್ಥಿಕೆಯ ಕುರಿತು ಊಹಾಪೋಹಗಳು ಹರಡುತ್ತಿರುವ ನಡುವೆ ಈ ಭೇಟಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಒಂದೆಡೆ ಭಾರತ ಅಮೆರಿಕ , ಇಸ್ರೇಲ್‌ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರೆ, ಅತ್ತ ಇರಾನ್ ಗೂ ಭಾರತದ ಮೇಲೆ ಒಳ್ಳೆಯ ಸ್ನೇಹವಿದ್ದು, ಹೀಗಾಗಿ ಭಾರತ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ತೆರೆದಿದೆ.

Must Read