ಹೊಸದಿಗಂತ ಡಿಜಿಟಲ್ ಡೆಸ್ಕ್:
EPFO ಸದಸ್ಯರಿಗೆ ಕಾಗದರಹಿತ, ವೇಗದ ಮತ್ತು ಸುಲಭ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ಈಗ ಹೊಸ ಬದಲಾವಣೆಗಳು ಯಾವುವು ಎಂದು ತಿಳಿಯೋಣ.
ತ್ವರಿತ ಕ್ಲೈಮ್ ಪ್ರಕ್ರಿಯೆ: ₹1 ಲಕ್ಷವರೆಗಿನ ಕ್ಲೈಮ್‌ಗಳನ್ನು 3 ದಿನಗಳಲ್ಲಿ ಸ್ವಯಂಚಾಲಿತವಾಗಿ ವಿಲೇವಾರಿ ಮಾಡಲಾಗುವುದು.
ಆನ್‌ಲೈನ್ ಹೆಸರು/ವಿವರ ಬದಲಾವಣೆ: UAN-ಆಧಾರ್ ಲಿಂಕ್ ಮಾಡಿದವರು EPFO ಕಚೇರಿಗೆ ಭೇಟಿ ನೀಡದೆ, ತಮ್ಮ ಹೆಸರು ಮತ್ತು ಇತರ ವಿವರಗಳನ್ನು ಸರಿಪಡಿಸಬಹುದು.
ಸುಲಭ ಪಿಎಫ್ ವರ್ಗಾವಣೆ: UAN ಲಿಂಕ್ ಮಾಡಿರುವ ಸದಸ್ಯರು ಹೊಸ ಕಂಪನಿಗೆ ಸೇರಿದಾಗ, ಹಳೆಯ ಪಿಎಫ್ ಅನ್ನು ಮ್ಯಾನೇಜ್‌ಮೆಂಟ್ ಅನುಮತಿಯಿಲ್ಲದೆ ಸ್ಥಳಾಂತರಿಸಬಹುದು.
ಚೆಕ್-ಲೀಫ್ ಅಗತ್ಯವಿಲ್ಲ: KYC ನವೀಕರಿಸಿದವರು, ಬ್ಯಾಂಕ್ ಖಾತೆ ಪರಿಶೀಲನೆಗೆ ಚೆಕ್ ಲೀಫ್ ಸಲ್ಲಿಸುವ ಅವಶ್ಯಕತೆ ಇಲ್ಲ.
ಅರ್ಹತಾ ಪರಿಶೀಲನೆ: ಕ್ಲೈಮ್ ಸಲ್ಲಿಸುವ ಮೊದಲು ಅರ್ಹತೆ ಪರಿಶೀಲಿಸುವ ವ್ಯವಸ್ಥೆ, ತಿರಸ್ಕೃತ ಕ್ಲೈಮ್‌ಗಳನ್ನು ಕಡಿಮೆ ಮಾಡಲಿದೆ.
99% ಕ್ಲೈಮ್ ಆನ್‌ಲೈನ್: 2024-25ರಲ್ಲಿ 7.14 ಕೋಟಿ ಕ್ಲೈಮ್‌ಗಳು ಆನ್‌ಲೈನ್‌ನಲ್ಲಿ ಪ್ರಕ್ರಿಯೆಯಾಗಿದೆ, EPFO ಕಚೇರಿಗೆ ಭೇಟಿ ಅಗತ್ಯವಿಲ್ಲ.
UPI ಪಾವತಿಗಳು: EPF ಕ್ಲೈಮ್ ಹಣವನ್ನು ಭವಿಷ್ಯದಲ್ಲಿ UPI ಮತ್ತು ಡಿಜಿಟಲ್ ವ್ಯಾಲೆಟ್ ಮೂಲಕ ಪಡೆಯಲು NPCI ಜೊತೆ ಚರ್ಚೆಗಳು ನಡೆಯುತ್ತಿವೆ.