ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು, ಸ್ವತಂತ್ರವಾಗಿ ನಿಲ್ಲಲ್ಲ: ಚಲುವಾದಿ ನಾರಾಯಸ್ವಾಮಿ

ದಿಗಂತ ವರದಿ ವಿಜಯಪುರ:

ಕೆ.ಎಸ್. ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. ಯಾವುದೇ ಕಾರಣಕ್ಕೂ ಅವರು ಸ್ವತಂತ್ರವಾಗಿ ನಿಲ್ಲಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಲುವಾದಿ ನಾರಾಯಸ್ವಾಮಿ ಹೇಳಿದರು.

ಕೆ.ಎಸ್. ಈಶ್ವರಪ್ಪ ಅಸಾಮಾಧಾನ ವಿಚಾರ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಯಾಕೆಂದರೆ ಅವರಲ್ಲಿ ದೊಡ್ಡತನವಿದೆ. ಮನೆಯವರಿಗೂ ಅವರು ಉತ್ತರ ಕೊಡಬೇಕಲ್ಲ. ಆವೇಶದಲ್ಲಿ ಒಂದು ಮಾತನಾಡಿರುತ್ತಾರೆ ಎಂದರು.

ನನಗೂ ಟಿಕೆಟ್ ಸಿಗಲಿಲ್ಲ ಎಂದರೆ ನಾನು ಹಾಗೆ ಮಾತನಾಡುತ್ತಿದ್ದೆ. ಮಗನಿಗೆ ಟಿಕೆಟ್ ಕೊಡಿಸಲೇಬೇಕು ಎಂದು ಹಠ ಹಿಡಿದ್ದರು. ಈ ತೀರ್ಮಾನ ಮಾಡಿದ್ದು, ಯಡಿಯೂರಪ್ಪನವರು ಅಥವಾ ವಿಜಯೇಂದ್ರ ಅಲ್ಲ. ಸೆಂಟ್ರಲ್ ನವರು ತೀರ್ಮಾನ ಮಾಡಿದ್ದಾರೆ ಎಂದರು.

ಸಾಧಕ ಬಾಧಕ ಅವರು ಪರಿಶೀಲನೆ ಮಾಡಿಯೇ ಮಾಡಿದ್ದಾರೆ. ನಾವೆಲ್ಲರೂ ಸೇರಿ ಪಕ್ಷ ಕಟ್ಟೋಣ. ಮತ್ತೆ ನಮ್ಮ ಸರ್ಕಾರ ಬಂದು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ‌ ಮಾಡುವ ನಿಟ್ಟಿನಲ್ಲಿ ನಾವೆಲ್ಲವೂ ಪ್ರಯತ್ನಿಸುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!