ಹೊಸದಿಗಂತ ವರದಿ, ಹರಪನಹಳ್ಳಿ(ವಿಜಯನಗರ):
ವಿಶ್ವ ಆಹಾರ ಸುರಕ್ಷತಾ ದಿನಾಚರಣೆ ನಿಮಿತ್ತ ವಿಶ್ವ ಆರೋಗ್ಯ ಸಂಸ್ಥೆ, ಎಫ್‌ಎಸ್‌ಎಸ್‌ಎಐ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಹೊಸದಿಗಂತ ದಿನಪತ್ರಿಕೆ ಮತ್ತು ಡಿಜಿಟಲ್ ಸಹಯೋಗದಲ್ಲಿ ಹರಪನಹಳ್ಳಿ ತಾಲೂಕಿನ ಮಾಚೆಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಆಹಾರ ಸುರಕ್ಷತೆ ಕುರಿತು ಪ್ರಬಂಧ ಸ್ಪರ್ಧೆಗೆ ವಿದ್ಯಾರ್ಥಿನಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ಶಾಲೆಯ ೩೧ ಜನ ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸುಮಾರು ಅರ್ಧ ಗಂಟೆ ಸಮಯದಲ್ಲಿ ಸುರಕ್ಷಿತ ಆಹಾರ, ಶುದ್ಧ ಕುಡಿಯುವ ನೀರು ಹಾಗೂ ಫಾಸ್ಟ್ ಫುಟ್‌ಗಳಲ್ಲಿ ಬರೆಸಲಾಗುವ ರಸಾಯನಯುಕ್ತ ಪದಾರ್ಥಗಳು, ಅದರ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು, ಅದನ್ನು ತಡೆಗಟ್ಟಲು ವರ್ತಕರು, ಸಾರ್ವಜನಿಕರು ವಹಿಸಬೇಕಾದ ಕ್ರಮಗಳ ಕುರಿತು ವಿದ್ಯಾರ್ಥಿಗಳು ತಮ್ಮ ಪ್ರಬಂಧದಲ್ಲಿ ಬೆಳಕು ಚೆಲ್ಲಿದರು.
ಬಳಿಕ ನಡೆದ ವಿಶ್ವ ಆಹಾರ ಸುರಕ್ಷತಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.
ಸ್ಪರ್ಧೆಯಲ್ಲಿ ಲಕ್ಷ್ಮಿ ಎಂ(ಪ್ರಥಮ), ಪದ್ಮಾಭಾಯಿ(ದ್ವಿತೀಯ) ಹಾಗೂ ಕೀರ್ತಿ ಜಿ. ತೃತೀಯ ಸ್ಥಾನ ಪಡೆದರು. ಅವರಿಗೆ ನಗದು ಬಹುಮಾನ ನೀಡಿ, ಪೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯ ವಿ.ಎಂ.ಅoಜಿನಪ್ಪ ಅಧ್ಯಕ್ಷತೆ ವಹಿಸುವರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಎಫ್‌ಎಸ್‌ಓ ಕಿರಣ್ ಕುಮಾರ್ ಬಲ್ಲೂರೆ, ಆರೋಗ್ಯ ಇಲಾಖೆಯ ಎನ್‌ಟಿಪಿಯ ಎಸ್‌ಟಿಎಲ್‌ಎಸ್ ಕೆ.ಎಂ.ಸತೀಶಚoದ್ರ, ಎಸ್‌ಟಿಎಸ್ ಡಿಒಟಿ ಪ್ರೊವೈಡರ್ ತಾತನಗೌಡ, ಬಿಎಚ್‌ಇಒ ಗೌವರಮ್ಮ ಹಾಗೂ ಶಾಲೆಯ ಸಹ ಶಿಕ್ಷಕರು ಇದ್ದರು.