ʼಪ್ರಾಣ ಹೋದರೂ ಕೊಟ್ಟ ಮಾತಿಗೆ ಎಂದೂ ತಪ್ಪುವುದಿಲ್ಲʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಾಣ ಹೋದರೂ ಕೊಟ್ಟ ಮಾತಿಗೆ ಎಂದೂ ತಪ್ಪುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕರಟಕ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿ ಬಳಿಕ ಉಗ್ರರಿರುವ ತಾಣಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಮಾತು ಕೊಟ್ಟಿದ್ದೆವು ಅದರ ಪ್ರಕಾರವೇ ನಡೆದುಕೊಂಡಿದ್ದೇವೆ ಎಂದು ಹೇಳಿದರು. ಬಿಹಾರದ ಜನತೆಗೆ ರಾಮನ ಪ್ರತಿಜ್ಞೆ ಏನೆಂದಬುದು ತಿಳಿದಿದೆ. ಅವರಂತೆಯೇ ಕೊಟ್ಟ ಮಾತನ್ನು ಪಾಲಿಸದೇ ಬಿಡುವುದಿಲ್ಲ ಎಂದರು.

ಉಗ್ರರ ದಾಳಿ ಬಳಿಕ ಬಿಹಾರದ ನೆಲದಲ್ಲಿಯೇ ಉಗ್ರರನ್ನು ಹುಡುಕಿ ಕೊಂದು, ಅವರು ಕನಸಲ್ಲೂ ನೆನಸಿರದ ಶಿಕ್ಷೆ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದೆ, ಈಗ ಆ ಮಾತು ಪೂರೈಸಿ ಮತ್ತೆ ನಾನು ಬಿಹಾರಕ್ಕೆ ಬಂದಿದ್ದೇನೆ ಎಂದರು.

ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ನಿಂತಿಲ್ಲ,ಮತ್ತೆ ತಲೆ ಎತ್ತಿದರೆ, ಅವರನ್ನು ಹೊಸಕಿಹಾಕುವವರೆಗೆ ಬಿಡುವುದಿಲ್ಲ. ನಮ್ಮ ಹೋರಾಟ ದೇಶದ ಪ್ರತಿಯೊಬ್ಬ ಶತ್ರುವಿನ ವಿರುದ್ಧವಾಗಿದೆ, ಅವನು ಗಡಿಯಾಚೆ ಇರಲಿ ಅಥವಾ ದೇಶದೊಳಗಿರಲಿ. ಕಳೆದ ವರ್ಷಗಳಲ್ಲಿ ಹಿಂಸಾಚಾರ ಮತ್ತು ಅಶಾಂತಿ ಹರಡುವವರನ್ನು ನಾವು ಹೇಗೆ ನಿರ್ಮೂಲನೆ ಮಾಡಿದ್ದೇವೆ ಎಂಬುದಕ್ಕೆ ಬಿಹಾರದ ಜನರು ಸಾಕ್ಷಿಯಾಗಿದ್ದಾರೆ ಎಂದು ಗುಡುಗಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!