ಜನರು ಮರೆತರೂ ಪಕ್ಷ ಗುರುತಿಸಿ ಜವಾಬ್ದಾರಿ ಕೊಟ್ಟಿರುವುದಕ್ಕೆ ಋಣಿ: ಮೇಘಾಲಯದ ನೂತನ ರಾಜ್ಯಪಾಲ ವಿಜಯಶಂಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೀವನಪೂರ್ತಿ ಪಕ್ಷ ಹಾಗೂ ಸಂಘದ ಏಳಿಗೆಗೆ ಶ್ರಮಿಸಿದ ನನ್ನನ್ನು ಜನರು ಮರೆತರೂ ಪಕ್ಷ ಗುರುತಿಸಿ ಜವಾಬ್ದಾರಿ ಕೊಟ್ಟಿರುವುದಕ್ಕೆ ಋಣಿಯಾಗಿದ್ದೇನೆ ಎಂದು ಮೇಘಾಲಯದ ನೂತನ ರಾಜಪಾಲರಾಗಿ ಆಯ್ಕೆಯಾದ ಸಿ.ಹೆಚ್. ವಿಜಯಶಂಕರ್ ಹೇಳಿದರು.

ರಾಜ್ಯಪಾಲ ಹುದ್ದೆಗೆ ಆಯ್ಕೆಯಾದ ಸಿಹೆಚ್.ವಿಜಯಶಂಕರ್ ಅವರು ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳಿಂದಿಗೆ ಮಾತನಾಡಿದ ಅವರು, ನನಗೆ 14 ವರ್ಷಗಳ ವನವಾಸ ಅಂತ್ಯ ಆಗಿದೆ. ಹಾಸನ ಲೋಕಸಭಾ ಚುನಾವಣೆ ನಂತರ ನಾನು ರಾಜಕೀಯ ಹಿನ್ನಡೆ ಅನುಭಿಸಿದೆ. ಅಲ್ಲಿಂದ ಜನ ನನ್ನನ್ನು ಮರೆತಿದ್ದರು. ಅಂತಹವರನ್ನ ಗುರುತಿಸಿ ಇಂತಹ ಉನ್ನತ ಹುದ್ದೆ ಕೊಟ್ಟಿರುವುದು ನನ್ನ ಬಿಜೆಪಿ ಪಕ್ಷ. ಎಲ್ಲವೂ ನನ್ನ ತಾಳ್ಮೆಯಿಂದಲೇ ಸಾಧ್ಯವಾಗಿದ್ದು ಎಂದು ಹೇಳಿದರು.

ಚಾಮುಂಡೇಶ್ವರಿ ವರ್ಧಂತಿ ದಿನ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನನಗ ಕರೆ ಮಾಡಿ ಈ ವಿಚಾರ ತಿಳಿಸಿದರು. ಬೆಳಗ್ಗೆ 9.30 ಕ್ಕೆ ಕರೆ ಮಾಡಿ ನಿಮಗೆ ಉನ್ನತವಾದ ಹುದ್ದೆ ಕೊಡುತ್ತಿದ್ದೇವೆ ಎಂದರು. ಅದು ನನಗೆ ಅವರು ಮಾಡಿದ ಮಾಡಿದ ಮೊದಲ ಫೋನ್ ಕರೆಯೂ ಆಗಿತ್ತು. ಇದರಿಂದಾಗಿ ನನಗೆ ತುಂಬಾ ಆಶ್ಚರ್ಯವಾಯಿತು. ಈ ಸಮಯದಲ್ಲಿ ಸೋತಾಗಲೂ ನನಗೆ ಅಧಿಕಾರ ಕೊಟ್ಟ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮತ್ತು ಈಗ ಅಧಿಕಾರ ಕೊಟ್ಟಿರುವ ಪ್ರಧಾನ ಮಂತ್ರಿಯನ್ನ ಸ್ಮರಿಸುತ್ತೇನೆ ಎಂದು ತಿಳಿಸಿದರು.

ಪ್ರತಿ ಹಂತದಲ್ಲೂ ನನ್ನ ಮೇಲೆ ಸಂಘದ ಪಕ್ಷದ ಜನರ ಋಣ ಇದೆ. ನಾನು ಈಗಲೂ ಅವರ ಋಣದಲ್ಲೇ ಇದ್ದೇನೆ. ಇನ್ಮುಂದೆ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಸದ್ಯ ಮೇಘಾಲಯದ ರಾಜ್ಯಪಾಲರ ಕಚೇರಿಯ ದೂರವಾಣಿಗಾಗಿ ಕಾಯುತ್ತಿದ್ದೇನೆ. ಸದ್ಯ ಎಲ್ಲಾ ಶಿಷ್ಟಾಚಾರದ ಬಗ್ಗೆ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ಗೊತ್ತಾಗಿದೆ. ಅವರ ಕರೆ ಬಂದ್ರೆ ನಾನು ನಾಳೆ ಬೆಳಗ್ಗೆ ಮೇಘಾಲಯಕ್ಕೆ ಪ್ರಯಾಣ ಬೆಳೆಸುತ್ತೇನೆ. ಇದೇ ತಿಂಗಳ ಜು.30ರಂದು ಪ್ರಮಾಣವಚನ ಸ್ವೀಕರಿಸಬೇಕೆಂದುಕೊಂಡಿದ್ದೇನೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!