ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲೆ ಹೆಚ್ಚಾದರೂ ಅತಿಯಾದ ಟ್ರಾಫಿಕ್‌ನಿಂದಾಗಿ ಸಮಯ ಉಳಿತಾಯಕ್ಕಾಗಿ ಮತ್ತೆ ಮೆಟ್ರೋ ಪ್ರಯಾಣದ ಮೊರೆ ಹೋಗಿದ್ದಾರೆ ಬೆಂಗಳೂರು ಜನ.
ಹೌದು! ನಮ್ಮ ಮೆಟ್ರೋ ಬೆಲೆ ಏರಿಕೆಯಿಂದ ಬೇಸತ್ತಿದ್ದ ಪ್ರಯಾಣಿಕರು ಮೆಟ್ರೋ ರೈಲು ಸಂಚಾರದಿಂದ ಕೆಲವು ದಿನಗಳ ಕಾಲ ದೂರ ಉಳಿದಿದ್ದರು. ಆದರೆ, ಇದೀಗ ಸಮಯ ಉಳಿತಾಯಕ್ಕಾಗಿ ಜನರು ಮೆಟ್ರೋಗೆ ಪುನಃ ಹತ್ತಿರವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಇಂದು ಸಾರ್ವತ್ರಿಕ ರಜಾ ದಿನವಾಗಿದ್ದರೂ 4 ಹೆಚ್ಚುವರಿ ಮೆಟ್ರೋ ರೈಲು ಸೇವೆಯನ್ನು ಒದಗಿಸಿದೆ.
ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿರುವ ಮೆಟ್ರೋ ಸಂಸ್ಥೆಯು, ಸಾರ್ವಜನಿಕರ ಅನುಕೂಲವನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ಬೈಯಪಹನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ (ಮೆಜೆಸ್ಟಿಕ್) ನಾಲ್ಕು ಹೆಚ್ಚುವರಿ ರೈಲುಗಳನ್ನು ಓಡಿಸಿದೆ. ಹೆಚ್ಚುವರಿಯಾಗಿ, ಮೆಜೆಸ್ಟಿಕ್‌ರೈಲಿನ ಸಂಚಾರವನ್ನು ಕಡಿಮೆ ಮಾಡಿ ಐಟಿಪಿಎಲ್‌ಗೆ ಹಿಂತಿರುಗಿಸಲಾಗಿದೆ. ಇದರೊಂದಿಗೆ, ಮೆಜೆಸ್ಟಿಕ್, ಗರುಡಾಚಾರ್‌ಪಾಳ್ಯ ಮತ್ತು ವೈಟ್‌ಫೀಲ್ಡ್‌ನಿಂದ ಒಟ್ಟು 7 ಹೊಸ ಟ್ರಿಪ್‌ಗಳು ಪ್ರಾರಂಭವಾಗುತ್ತವೆ ಎಂದಿದೆ.
ಟಿಕೆಟ್ ದರ ಏರಿಕೆಯಿಂದ ಇದರಿಂದಾಗಿ ಒಂದೂವರೆ ತಿಂಗಳು ಪ್ರಯಾಣಿಕರು ಮೆಟ್ರೋದಿಂದ ದೂರ ಹೋಗಿದ್ದರು. ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ 1.50 ಲಕ್ಷ ಪ್ರಯಾಣಿಕರು ಕಡಿಮೆಯಾಗಿದ್ದರು. ಆದರೆ ಇದೀಗ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸಹಜಸ್ಥಿತಿಯತ್ತ ಬಂದಿದ್ದು,ಆದರೆ, ಏಪ್ರಿಲ್ ಮೊದಲ ವಾರದಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಪುನಃ ಏರಿಕೆಯಾಗಿದೆ. ಇದೀಗ ನಿತ್ಯ 8 ಲಕ್ಷ ದಿಂದ 8.25 ಲಕ್ಷದವರಿಗೆ ನಿತ್ಯ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ.