ಹಂದಿಗೆ ಲಿಪ್ಸ್‌ಟಿಕ್‌ ಹಾಕಿದ್ರೂ ಕಸ ತಿನ್ನೋದು ಬಿಡೋದಿಲ್ಲ: ಮಾಜಿ ಪೆಂಟಗನ್ ಅಧಿಕಾರಿ ಸ್ಫೋಟಕ ಹೇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಂದಿಗೆ ಲಿಪ್ಸ್‌ಟಿಕ್‌ ಹಾಕಿದ್ರೂ ಕಸ ತಿನ್ನೋದು ಬಿಡೋದಿಲ್ಲ ಎಂದು ಪಹಲ್ಗಾಮ್‌ ದಾಳಿ ಬಗ್ಗೆ ಅಮೆರಿಕ ಮಾಜಿ ಪೆಂಟಗನ್ ಅಧಿಕಾರಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಅವರು ಪೆಹಲ್ಗಾಮ್ ಉಗ್ರ ದಾಳಿಯನ್ನು ತೀವ್ರ ಖಂಡಿಸಿದ್ದು, ಈ ದಾಳಿ ಹಿಂದೆ ಪಾಕಿಸ್ತಾನದ ನೇರ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಈ ದಾಳಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುಖ್ಯಸ್ಥ ಅಸಿಮ್ ಮುನೀರ್ ಕುಮ್ಮಕ್ಕು ಇದ್ದು, ಅವರ ಕೃಪಾಕಟಾಕ್ಷದಿಂದಲೇ ಉಗ್ರರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ದಿವಂಗತ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿರುವ ರೂಬೆನ್, ಹಂದಿಗೆ ಲಿಪ್ ಸ್ಟಿಕ್ ಹಾಕಿದ್ರೂ.. ಅದು ತನ್ನ ಸ್ವಾಭಾವಿಕ ಬುದ್ದಿ ಬಿಡುವುದಿಲ್ಲ ಎಂದು ಹೇಳಿದರು. ಅಲ್ಲದೆ ಅಸಿಮ್ ಮುನೀರ್ ರನ್ನು ಲಷ್ಕರ್ ಉಗ್ರ ಸಂಘಟನೆ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಗೆ ಹೋಲಿಸಿದ್ದಾರೆ.

ಒಸಾಮಾ ಬಿನ್ ಲಾಡೆನ್ ಮತ್ತು ಅಸಿಮ್ ಮುನೀರ್ ನಡುವಿನ ಏಕೈಕ ವ್ಯತ್ಯಾಸವೆಂದರೆ ಒಸಾಮಾ ಬಿನ್ ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ. ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅರಮನೆಯಲ್ಲಿ ವಾಸಿಸುತ್ತಿದ್ದಾನೆ. ಆದರೆ ಅದನ್ನು ಮೀರಿ, ಇಬ್ಬರೂ ಒಂದೇ ಆಗಿದ್ದಾರೆ ಮತ್ತು ಅವರ ಅಂತ್ಯವೂ ಒಂದೇ ಆಗಿರಬೇಕು ಎಂದು ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಹೋದ್ಯೋಗಿ ಕೂಡ ಆಗಿರುವ ರೂಬೆನ್ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!