ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಎರಡನೇ ಪತ್ನಿ ಪವಿತ್ರಾ ಗೌಡ ಸೇರಿದಂತೆ 13 ಜನರ ಬಂಧನವಾಗಿದ್ದು, ಅಭಿಮಾನಿಗಳಲ್ಲಿ ಆತಂಕವಾಗಿದೆ. ಕೆಲವು ಕಡೆ ದರ್ಶನ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಕೆಲ ಅಭಿಮಾನಿಗಳು ದರ್ಶನ್ ಪರ ವಹಿಸಿ ಮಾತನಾಡುತ್ತಿದ್ದಾರೆ.
ಇರೋ ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ. ಮದುವೆಯಾಗಿ ಒಂದು ವರ್ಷ ಆಗಿತ್ತು, ಸೊಸೆ ಗರ್ಭಿಣಿಯಾಗಿದ್ದು, ಆಕೆಯ ಮುಂದಿನ ಭವಿಷ್ಯ ಏನು ಎಂದು ಹೇಳಿ? ನಾವು ಬೆಂಗಳೂರಿಗೆ ಹೋದಾಗ ಮಗನ ಕೊಲೆ ಆಗಿದೆ ಅನ್ನೋ ವಿಚಾರ ಗೊತ್ತಾಯ್ತು. ತುಂಬಾ ಹೇಯವಾಗಿ ಹೊಡೆದು ಮಗನ ಕೊಲೆ ಮಾಡಲಾಗಿತ್ತು. ತಲೆ, ಎದೆ, ಕಾಲು, ಮರ್ಮಾಂಗಕ್ಕೂ ಹೊಡೆದಿದ್ದಾರೆ. ಈ ರೀತಿಯ ಭೀಕರ ಕೃತ್ಯವನ್ನು ನಾನು ನೋಡಿರಲಿಲ್ಲ ಎಂದಿದ್ದಾರೆ.
ದರ್ಶನ್ ಒಬ್ಬ ದೊಡ್ಡ ನಟ. ತಪ್ಪು ಮಾಡಿದ್ರೆ ಕರೆದು ಕೇಳಬಹುದಿತ್ತು. ಈ ರೀತಿಯಾಗಿ ಗ್ಯಾಂಗ್ ಕರೆಸಿ ಕೊಲೆ ಮಾಡಿದ್ದು ತಪ್ಪು. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಸರ್ಕಾರ ನನ್ನ ಸೊಸೆಗೆ ಪರಿಹಾರ ನೀಡಬೇಕು ಎಂದು ರತ್ನಪ್ರಭಾ ಆಗ್ರಹಿಸಿದ್ದಾರೆ.