ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದ ನೀರಿನ ಗುಣಮಟ್ಟದ ಕುರಿತು ವಿವಾದ ಎಬ್ಬಿರುವ ನಡುವೆ ಖ್ಯಾತ ವಿಜ್ಞಾನಿ ಡಾ. ಅಜಯ್ ಸೋಂಕರ್ ಅವರು ಗಂಗಾ ನದಿ ಸಂಪೂರ್ಣವಾಗಿ ರೋಗಾಣು ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಮಹಾಕುಂಭ ಮೇಳದಲ್ಲಿ ಇದುವರೆಗೂ 60 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಇದರ ನಡುವೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಗಾ ನೀರಿನ ಗುಣಮಟ್ಟದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ ನಂತರ ಖ್ಯಾತ ವಿಜ್ಞಾನಿ ಡಾ. ಅಜಯ್ ಸೋಂಕರ್ ಅವರು ಗಂಗಾ ನದಿಯು 1,100 ವಿಧದ ಬ್ಯಾಕ್ಟಿರಿಯೊಫೇಜ್‌ಗಳನ್ನು ಹೊಂದಿರುವ ವಿಶ್ವದ ಏಕೈಕ ಸಿಹಿನೀರಿನ ನದಿಯಾಗಿದೆ. ಇದು ಮಾಲಿನ್ಯವನ್ನು ನಿವಾರಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ ಉಲ್ಲೇಖಿಸಲಾಗಿದೆ.
ಡಾ. ಅಜಯ್ ಕುಮಾರ್ ಸೋಂಕರ್ ಅವರು, ಗಂಗಾ ನದಿಯ ಶುದ್ಧತೆಯ ಬಗ್ಗೆ ಇರುವ ಅನುಮಾನಗಳನ್ನು ವೈಜ್ಞಾನಿಕ ಪುರಾವೆಗಳೊಂದಿಗೆ ನಿವಾರಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಮಹಾ ಕುಂಭ ನಗರದ ಸಂಗಮ್ ನೋಸ್ ಮತ್ತು ಅರೈಲ್ ಸೇರಿದಂತೆ ಐದು ಪ್ರಮುಖ ಸ್ನಾನಗೃಹಗಳಿಂದ ಡಾ. ಸೋಂಕರ್ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ನಂತರ ಈ ಮಾದರಿಗಳನ್ನು ಅವರ ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕೋಟ್ಯಂತರ ಭಕ್ತರು ನದಿಯಲ್ಲಿ ಸ್ನಾನ ಮಾಡುತ್ತಿದ್ದರೂ, ನೀರಿನ pH ಮಟ್ಟದಲ್ಲಿ ಯಾವುದೇ ಬ್ಯಾಕ್ಟೀರಿಯಾದ ಬೆಳವಣಿಗೆ ಅಥವಾ ಇಳಿಕೆ ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ.
ಡಾ. ಸೋಂಕರ್ ಅವರ ಸಂಶೋಧನೆಯು ಗಂಗಾ ನೀರಿನಲ್ಲಿ 1,100 ವಿಧದ ಬ್ಯಾಕ್ಟೀರಿಯೊಫೇಜ್‌ಗಳಿವೆ ಎಂದು ಬಹಿರಂಗಪಡಿಸಿದೆ. 57 ಕೋಟಿ ಭಕ್ತರು ನದಿ ಸ್ನಾನ ಮಾಡಿದ ನಂತರವೂ ನದಿಯು ಕಲುಷಿತವಾಗದಂತೆ ನೋಡಿಕೊಳ್ಳುತ್ತದೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಯಾವುದೇ ದುರ್ವಾಸನೆ ಅಥವಾ ಬ್ಯಾಕ್ಟೀರಿಯಾದ ಬೆಳವಣಿಗೆ ಪತ್ತೆಯಾಗಿಲ್ಲ ಎಂದು ಡಾ. ಸೋಂಕರ್ ದೃಢಪಡಿಸಿದ್ದಾರೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.