ಪಿಎಫ್‌ಐ ನಿಷೇಧವಾದರೂ ಅದರ ಇಸ್ಲಾಮಿಕ್ ಅನುವಾದ ಕೇಂದ್ರ ವೆಬ್‌ಸೈಟ್‌ ಇನ್ನೂ ಸಕ್ರಿಯ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಪಿಎಫ್‌ಐ ನಿಷೇಧಿತ ಸಂಘಟನೆ ಎಂದು ಘೋಷಿಸಲಾಗಿದ್ದರೂ, ಅದರ ವೆಬ್‌ಸೈಟ್‌ವೊಂದು ಇನ್ನೂ ಕಾರ್ಯನಿರ್ವಹಿಸುತ್ತಿತ್ತು ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ನಿಷೇಧಿತ ಸಂಘಟನೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಇಸ್ಲಾಮಿಕ್ ಅನುವಾದ ಕೇಂದ್ರ ಎಂಬ ವೆಬ್‌ಸೈಟ್ ಅನ್ನು ಬಿಹಾರದ ಗುಪ್ತಚರ ಮತ್ತು ಭದ್ರತಾ ವಿಭಾಗದ ಪೊಲೀಸರು ಪತ್ತೆ ಮಾಡಿದ್ದಾರೆ. ವೆಬ್‌ಸೈಟ್ ಮತ್ತು ಇದರ ಜತೆ ಸಂಪರ್ಕದಲ್ಲಿದ್ದ ಜನರ ಬಗ್ಗೆ ಪರಿಶೀಲಿಸಲು ಐಜಿಪಿ ಕಚೇರಿ ಮತ್ತು ಸ್ಪೆಷಲ್ ಬ್ರಾಂಚ್ ನ.೨೧ರಂದು ಪ್ರತಿ ಜಿಲ್ಲೆಯ ಪೊಲೀಸರಿಗೂ ಪತ್ರ ರವಾನಿಸಿದೆ.

ಐಟಿಸಿ ವೆಬ್‌ಸೈಟ್‌ನಲ್ಲಿರುವ ಪ್ರಕಾರ, ಆತ್ಮೀಯ ಮುಸ್ಲಿಂ ಸಹೋದರ ಮತ್ತು ಸಹೋದರಿಯರೇ, ಜಿಹಾದಿ ಮೀಡಿಯಾ ವರ್ಕ್ಸ್ ಗೆ ಕೊಡುಗೆ ನೀಡಲು ನೀವು ಆಸಕ್ತಿ ಹೊಂದಿದ್ದೀರಾ? ನಾವು ಅನುವಾದಕಾರರನ್ನು ಹುಡುಕುತ್ತಿದ್ದೇವೆ. ನೀವು ಯಾವ ಭಾಷೆಯಲ್ಲಿ ಕೆಲಸ ಮಾಡಬಹುದು? ಬನ್ನಿ, ಮುಜಾಹಿದ್ ಉಲಾಮ ಮತ್ತು ಉಮಾರಾಗಳ ಬರವಣಿಗೆ ಹಾಗೂ ಅನುವಾದದ ನಮ್ಮ ಯೋಜನೆಯಲ್ಲಿ ಪಾಲ್ಗೊಳ್ಳೋಣ.

ಜಿಹಾದ್ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಲು ನಿಮಗೆ ಇದು ಉತ್ತಮ ಅವಕಾಶ. ನಿಮ್ಮ ಅಮೂಲ್ಯ ಕೆಲಸದಿಂದ ನೆರೆ ಹೊರೆಯ ಮುಸ್ಲಿಂ ಸಹೋದರ ಮತ್ತು ಸಹೋದರಿಯರಿಗೆ ಅನುಕೂಲ ಪಡೆಯಿರಿ ಎಂದು ಉಲ್ಲೇಖವಾಗಿದೆ.

ಐಟಿಸಿ ಬಿಹಾರದಲ್ಲಿ ಮುಸ್ಲಿಂ ಯುವಕರಿಗೆ ಜಿಹಾದಿ ಪುಸ್ತಕಗಳು ಮತ್ತು ಪಠ್ಯವನ್ನು ಒದಗಿಸುತ್ತಿತ್ತು. ವಿಪಿಎನ್ ಮೂಲಕ ಮಾತ್ರ ತೆರೆಯಬಹುದಾದ ವೆಬ್‌ಸೈಟ್ ಅನ್ನು ಹೊಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಬಿಹಾರ ಪೊಲೀಸರು, ಸಂಭವನೀಯ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!