ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲೊಬ್ಬ ಖತರ್ನಾಕ್ ಬೈಕ್ ಕಳ್ಳನನ್ನು ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ. ಅದ್ರಲ್ಲೂ ಈ ಕಳ್ಳ ಅಂತಿಂತ ಕಳ್ಳ ಅಲ್ಲ ಸ್ವಾಮಿ.. ಬೈಕ್ ಕದಿಯೋದ್ರಲ್ಲಿ ಇವನು ಸೆಂಚುರಿಯನ್ನೇ ಬಾರಿಸಿದ್ದಾನೆ. ಮೂರು ವರ್ಷದಲ್ಲಿ ಈತ ಕಳ್ಳತ ಮಾಡಿರೋ ಬೈಕ್ ಲೆಕ್ಕ ಕೇಳಿದ್ರೆ ನೀವೇ ಶಾಕ್ ಆಗ್ತೀರಾ. ಬರೋಬ್ಬರಿ ನೂರು ಬೈಕ್ ಇಲ್ಲಿವರೆಗೂ ಕಳ್ಳತನ ಮಾಡಿದ್ದಾನೆ.
ಈ ಬೈಕ್ ಖದೀಮ ಆಂಧ್ರಪ್ರದೇಶದ ಬಂಗಾರುಪಾಳ್ಯಂನ ನಿವಾಸಿಯಾದ ಪ್ರಸಾದಬಾಬು ಎಂದು ಗುರುತಿಸಲಾಗಿದೆ. ದುಬಾರಿ ಬೈಕ್ ಗಳೇ ಈತನ ಟಾರ್ಗೆಟ್.
ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನೇ ಕಳ್ಳತನ ಮಾಡುತ್ತಿದ್ದ. ಬಳಿಕ ಮಾರಿಕೊಂಡು ಬಂದ ಹಣದಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ.
ಒಟ್ಟು 20 ರಾಯಲ್ ಎನ್ಫಿಲ್ಡ್, 30 ಪಲ್ಸರ್ ಬೈಕ್, 40 ಆ್ಯಕ್ಟಿವಾ ಬೈಕ್ಗಳನ್ನು ಸೇರಿ ಇನ್ನುಳಿದ ಹಲವು ದುಬಾರಿ ಬೈಕ್ಗಳನ್ನು ಕದ್ದಿದ್ದಾನೆ. ಸದ್ಯ ಪೊಲೀಸರು ಈ ಖತರ್ನಾಕ್ ಕಳ್ಳನನ್ನು ಬಂಧಿಸಿದ್ದು. ಸುಮಾರು 1.45 ಕೋಟಿ ರೂಪಾಯಿ ಮೌಲ್ಯದ 100 ಬೈಕ್ ವಶಕ್ಕೆ ಪಡೆದುಕೊಂಡಿದ್ದು. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.