ಹೊಸದಿಗಂತ ವರದಿ ಹುಬ್ಬಳ್ಳಿ:
ದೇಶದ ಆಚಾರ, ವಿಚಾರ, ಸಿದ್ಧಾಂತ ಹಾಗೂ ಸಂಸ್ಕೃತಿ ಕೇವಲ ಮಾತಾಗದೇ ಅನುಷ್ಠಾಗೊಳ್ಳಬೇಕು ಎಂದು ಉಡುಪಿ ಪೇಜಾವರ ಮಠಾಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ಮಾಧ್ವ ಮಹಾಮಂಡಲದ ವತಿಯಿಂದ ಇಲ್ಲಿನ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ “ಷಷ್ಟ್ಯಬ್ದ ಅಭಿವಂದನಾ” ಸಂತ ಸಂಗಮ ಹಾಗೂ ರಾಷ್ಟ್ರಪ್ರಶಸ್ತಿ ಭಾಜನರಾದ ಪಂ.ಪಂಢರೀನಾಥಾಚಾರ್ಯ ಗಲಗಲಿಯವರ ಜನ್ಮಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಪ್ರತಿ ಶ್ವಾಸವೂ ಭಗವಂತನ ಸ್ಮರಿಸುವಂತಾಗಬೇಕು. ಅಂದಾಗ ಮಾತ್ರ ಮನುಷ್ಯ ಸಂತೃಷ್ಟರಾಗುತ್ತಾನೆ. ಇಂತಹ ಬದುಕು ಪ್ರತಿಯೊಬ್ಬರ ಬದುಕಾಗಬೇಕು ಎಂದರು.
ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಹ ಶ್ವಾಸದ ಬಗ್ಗೆ ತಿಳಿಸುವುದರ ಜೊತೆಗೆ ಪ್ರಾಯೋಗಿಕವಾಗಿ ಹೇಳಿದರು. ವಚನಗಳಲ್ಲಿ ತಿಳಿಸಿದಂತೆ ಅವರ ಸಿದ್ಧಾಂತ ನಮ್ಮ ಸಿದ್ಧಾಂತ ಬೇರೆ ಅಲ್ಲ. ಸ್ವದೇಶಿಯರು ಅಷ್ಟೇ ಅಲ್ಲದೇ ವಿದೇಶಿಗರು ಶ್ರೀಗಳಿಂದ ಲಿಂಗ ದೀಕ್ಷೆ ಪಡೆದು ಯೋಗ ಹಾಗೂ ಪೂಜೆ ಅನುಸರಿಸುತ್ತಿರುವುದು ಸಂತಸದ ಸಂಗತಿ ಎಂದರು.