ಪ್ರತಿ ತಂಡವು ಇಂತಹ ಕಠಿಣ ಪರಿಸ್ಥಿತಿಯನ್ನು ಅನುಭವಿಸಿದೆ: ಸೋಲಿನ ಕಹಿ ನೆನಪಿನಲ್ಲಿ ರೋಹಿತ್ ಟ್ವೀಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅತ್ಯಂತ ಯಶಸ್ಸು ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಪ್ರಸ್ತುತ ಆವೃತ್ತಿಯಲ್ಲಿ ಸತತ 8 ಸೋಲುಗಳನ್ನು ಕಂಡು ನಿರಾಶೆಯನುಭವಿಸಿದೆ. ಈ ಕುರಿತು ಸ್ವತಃ ನಾಯಕ ರೋಹಿತ್ ಶರ್ಮಾ ಕೂಡ ತಂಡ 15ನೇ ಆವೃತ್ತಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಗಿದ ಎಂದು ಒಪ್ಪಿಕೊಂಡಿದ್ದಾರೆ.
ಪ್ರಸಿದ್ಧ ತಂಡಗಳು ಇಂತಹ ಕಠಿಣ ಪರಿಸ್ಥಿತಿಯನ್ನು ಅನುಭವಿಸಿ ಮುಂದೆ ಹೋಗಿರುತ್ತವೆ, ಈ ಸಂದರ್ಭದಲ್ಲಿ ಎಲ್ಲರೂ ಒಂದಾಗಿರಬೇಕೆಂದು ತಿಳಿಸಿದ್ದಾರೆ. ನಾವು ಪ್ರಸ್ತುತ ನಡಯುತ್ತಿರುವ ಟೂರ್ನಮೆಂಟ್​ನಲ್ಲಿ ನಮ್ಮ ಉತ್ತಮ ಪ್ರದರ್ಶನ ತೋರಿಲ್ಲ. ಆದರೆ, ಈ ರೀತಿ ನಡೆಯುತ್ತಿರುತ್ತವೆ. ಹಲವು ಕ್ರೀಡಾ ದೈತ್ಯರು ಇದೇ ರೀತಿ ಕಠಿಣ ಪರಿಸ್ಥಿತಿಯನ್ನು ಎದುರಿಸಿಯೇ ಹೋಗಿರುತ್ತಾರೆ.ಆದರೆ, ನಾನು ಈ ತಂಡವನ್ನು ಮತ್ತು ಇಲ್ಲಿ ಪರಿಸರವನ್ನು ತುಂಬಾ ಇಷ್ಟಪಡುತ್ತೇನೆ. ಇಲ್ಲಿಯವರೆಗೂ ನಮ್ಮ ತಂಡದ ಮೇಲೆ ನಂಬಿಕೆ ಮತ್ತು ಅಂತ್ಯವಿಲ್ಲದ ನಿಷ್ಠೆ ತೋರಿಸಿದ ಹಿತೈಷಿಗಳನ್ನು ಪ್ರಶಂಸಿಸಲು ಬಯಸುತ್ತೇನೆ ಎಂದು ರೋಹಿತ್ ಟ್ವೀಟ್​ ಮಾಡಿದ್ದಾರೆ.
ಟೂರ್ನಮೆಂಟ್​ ಮೊದಲಾರ್ಧ ಮುಗಿದಿದ್ದು, ಮುಂಬೈ ಇನ್ನೂ ಜಯ ಸಾಧಿಸಲು ಸಾಧ್ಯವಾಗಿಲ್ಲ. ಸ್ವತಃ ರೋಹಿತ್ ಶರ್ಮಾ ಕೂಡ ನಿರೀಕ್ಷಿತ ಪ್ರದರ್ಶನ ತೋರಿಲ್ಲ, ಜೊತೆಗಾರ ಇಶಾನ್​ ಕಿಶನ್ ತಾವು ಪಡೆದಿರುವ 15.25 ಕೋಟಿ ರೂಗಳಿಗೆ ತಕ್ಕಂತೆ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಲ್ಲದೇ ಬೌಲಿಂಗ್ ಘಟಕ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!