ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಗೌರವ ಕೊಡಲೇಬೇಕು: ಸಂಸದೆ ಸುಮಲತಾ ಅಂಬರೀಶ್

ಹೊಸದಿಗಂತ ಮಂಡ್ಯ :

ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಗೌರವ ಕೊಡಲೇಬೇಕು. ಈ ವಿಚಾರದ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲು ಹೋಗುವುದಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರಜ್ವಲ್ ರೇವಣ್ಣ ಪ್ರಕಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ತೀರ್ಪು ಕೊಟ್ಟ ಮೇಲೆ ಮಾತನಾಡುವುದಕ್ಕೆ ಏನೂ ಇಲ್ಲ. ದೋಷಿ ಎಂದು ಹೇಳಿದ ಮೇಲೆ ಮುಗಿತು. ಶಿಕ್ಷೆ ಏನು ಪ್ರಕಟ ಆಗುತ್ತೆ ಎನ್ನುವುದನ್ನು ನೋಡೋಣ ಅಷ್ಟೆ ಎಂದರು.

ಆನ್‌ಲೈನ್ ಟ್ರೋಲ್ ಕೀಳುತನದ ಮಾತುಗಳು ಹೊಸದಲ್ಲ :
ನನಗೂ ಸಹ ಆನ್‌ಲೈನ್ ಟ್ರೋಲ್, ಕೀಳುಮಟ್ಟದ ಮಾತುಗಳು ಹೊಸದಲ್ಲ. ಐದಾರು ವರ್ಷಗಳಿಂದ ನಾನು ಅನುಭವಿಸುತ್ತಲೇ ಬರುತ್ತಿದ್ದೇನೆ. ನಾನು ಸಾಕಷ್ಟು ಬಾರಿ ಎದುರಿಸಿದ್ದೇನೆ. ಕೆ.ಆರ್. ನಗರದಲ್ಲಿ ನನ್ನ ಮೇಲೆ ಹಲ್ಲೆ ಸಹ ಆಗಿತ್ತು. ನಾನು ಆಗ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಇಲ್ಲಿಯವರೆವಿಗೂ ಈ ಬಗ್ಗೆ ನನಗೆ ನ್ಯಾಯ ದೊರೆತಿಲ್ಲ. ಹಲ್ಲೆ ಮಾಡಿದವರನ್ನು ಪೊಲೀಸರು ಬಂಧನ ಮಾಡಿಲ್ಲ. ಸೋಶಿಯಲ್ ಮೀಡಿಯಾವನ್ನು ಹೇಗೆ ಬಳಸಬೇಕೆಂದು ಯುವ ಸಮೂಹ ಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.

ಸೋಶಿಯಲ್ ಮೀಡಿಯಾದವರು ಬೇರೆಯವರನ್ನು ಟಾರ್ಗೆಟ್ ಮಾಡುವ ವೆಪನ್ ಎಂದುಕೊಂಡಿದ್ದಾರೆ. ಅವರನ್ನು ಕಂಡುಹಿಡಿಯುವ ಸಾಮರ್ಥ್ಯ ತಂತ್ರಜ್ಞಾನ ಮುಂದುವರಿದಿದೆ. ನಮ್ಮರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಭಾವುಕರಾಗಿ, ಕೆಟ್ಟದಾಗಿ ಕಾಮೆಂಟ್ ಮಾಡಿದರೆ ಅವರ ಬದುಕು ಹಾಳಾಗುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!