ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಗಂಡ ಸಿನಿಮಾರಂಗದಲ್ಲಿ ಬೆಳೆಯುತ್ತಿದ್ದಾರೆ ಅಂತ ಷಡ್ಯಂತ್ರ ಮಾಡಿದ್ದಾರೆ. ಸಂತ್ರಸ್ತೆ ನಟಿ ಹೇಳೋದೆಲ್ಲ ಸುಳ್ಳು, ನನ್ನ ಗಂಡನಿಗೆ ನ್ಯಾಯ ಸಿಗುವ ತನಕ ಹೋರಾಡುತ್ತೇನೆ ಎಂದು ಆರೋಪಿ ನಟ ಮಡೆನೂರು ಮನು ಪತ್ನಿ ದಿವ್ಯಾ ಹೇಳಿದ್ದಾರೆ.
ಬೇಕಂತಲೇ ನನ್ನ ಗಂಡನ ವಿರುದ್ಧ ಪಿತೂರಿ ಮಾಡಲಾಗಿದೆ. ಮಚ್ಚಾ ನೀನು ಬೆಳೆಯಬೇಕು ಅಂತ ಅಂದು ಹೇಳಿದ್ದ ಗೆಳತಿ, ಈಗ್ಯಾಕೆ ಆರೋಪ ಮಾಡ್ತಿದ್ದಾರೆ. ಇದು ಬೇಕು ಅಂತಲೇ ಮಾಡ್ತಿರೋ ಆರೋಪ. ಆಕೆ ಬೇರೆಯವರ ಬಗ್ಗೆಯೂ ಇದೇ ಥರಾ ಆರೋಪ ಮಾಡಿದ್ದಾಳೆ. ಆಕೆ ಮತ್ತು ಪತಿ ಮನು ಜೊತೆಗಿನ ಸಂಬಂಧದ ಬಗ್ಗೆ ನನಗೇನು ಗೊತ್ತಿಲ್ಲ. ಆದರೆ ಆಕೆ ಹೇಳಿರೋದೆಲ್ಲ ಸುಳ್ಳು, ನನ್ನ ಗಂಡನಿಗೆ ನ್ಯಾಯ ಸಿಗೋ ತನಕ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
ರಿಯಾಲಿಟಿ ಶೋನಲ್ಲಿ ಸ್ಕ್ರಿಪ್ಟ್ ರಿಹರ್ಸಲ್ ಹೇಗಿರತ್ತೋ ಹಾಗೆ ಇಲ್ಲಿಯೂ ಏನೋ ಆಗಿರತ್ತೆ. ಎಲ್ಲದಕ್ಕೂ ತನಿಖೆ ಆಗಬೇಕು, ಸತ್ಯ ಹೊರಗಡೆ ಬರಬೇಕು ಎಂದು ಹೇಳಿದ್ದಾರೆ.
6 ತಿಂಗಳಿಂದ ನನ್ನ ಗಂಡ ಕಷ್ಟಪಟ್ಟು ಬಾಡಿ ಬಿಲ್ಡಿಂಗ್ ಮಾಡಿದ್ದಾರೆ. ಬಾಡಿ ಬಿಲ್ಡಿಂಗ್ ಮಾಡೋದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತಿದೆ. 3 ವರ್ಷದಿಂದ ಈ ಸಿನಿಮಾಗಾಗಿ ಕಷ್ಟಪಟ್ಟಿದ್ದಾರೆ. ಇಂದು ನನ್ನ ಗಂಡ ಥಿಯೇಟರ್‌ನಲ್ಲಿ ಇಲ್ಲ. ನನಗೆ ಈ ವಿಷಯ ತುಂಬಾ ಬೇಸರ ಆಗಿದೆ. ನಿರ್ಮಾಪಕರು ಚಿತ್ರತಂಡ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ನೋಡಿ ಎಂದು ಮನು ಪತ್ನಿ ಮನವಿ ಮಾಡಿದ್ದಾರೆ.