ಅಂದಿನ ಕಾಂಗ್ರೆಸ್ ಸರ್ಕಾರದಿಂದ ಪರೇಶ ಮೇಸ್ತ ಸಾವಿನ ಪ್ರಕರಣದ ಸಾಕ್ಷ್ಯ ನಾಶ: ನಾಗರಾಜ ನಾಯಕ್

ಹೊಸದಿಗಂತ ವರದಿ,ಕಾರವಾರ:

ಪರೇಶ ಮೇಸ್ತ ಸಾವಿನ ಪ್ರಕರಣದ ಕಡತಗಳನ್ನು ಸಿ.ಬಿ.ಐ ಗೆ ತಲುಪಿಸಲು ವಿಳಂಬ ಮಾಡುವ ಮೂಲಕ ಅಂದಿನ ಕಾಂಗ್ರೆಸ್ ಸರ್ಕಾರ ಪ್ರಕರಣದ ಸಾಕ್ಷಾಧಾರಗಳನ್ನು ನಾಶ ಪಡಿಸುವ ಮೂಲಕ ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಕೃತ್ಯಗಳನ್ನು ನಡೆಸಿದೆ ಎಂದು ಬಿಜೆಪಿ ಮಾದ್ಯಮ ವಕ್ತಾರ ನಾಗರಾಜ ನಾಯಕ ಅವರು ಹೇಳಿದರು .

ಕಾರವಾರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಪರೇಶ ಮೇಸ್ತ ಅವರ ಸಾವಿನಿಂದ ಜಿಲ್ಲೆಯಲ್ಲಿ ಸೋಲು ಅನುಭವಿಸೆದೆವು, ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಯಿತು ಎಂದು ಅಮಾಯಕ ಯುವಕನ ಸಾವಿನಲ್ಲೂ ಲಾಭ ನಷ್ಟದ ಲೆಕ್ಕಾಚಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಇಂದು ಅದೇ ವಿಷಯದ ಮೇಲೆ ಜನಜಾಗೃತಿ ಕಾರ್ಯಕ್ರಮ ಮಾಡುವ ಮೂಲಕ ರಾಜಕೀಯ ಲೆಕ್ಕಾಚಾರಕ್ಕೆ ಇಳಿದಿರುವುದು ನಾಚಿಗೆಗೇಡು ಎಂದರು.

ಪ್ರಕರಣವನ್ನು ಸಿಬಿಐಗೆ ವಹಿಸುವ ಪೂರ್ವದಲ್ಲೇ ಹಳ್ಳ ಹಿಡಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ, ಕೆಲವೊಂದು ಅಗತ್ಯ ಮಹತ್ವಪೂರ್ಣ ಸಾಕ್ಷಿ, ಪುರಾವೆಗಳನ್ನು ಸಿ.ಬಿ.ಐಗೆ ನೀಡಲಾಗಿಲ್ಲ ಎಂದ ಅವರು ದೂರು ದಾಖಲಾದ ಕೂಡಲೇ ಪ್ರಕರಣವನ್ನು ಸಿ.ಬಿ.ಐ ಗೆ ಯಾಕೆ ನೀಡಿಲ್ಲ, ಅಗತ್ಯ ಕಡತಗಳನ್ನು ಸಲ್ಲಿಸಲು 5 ತಿಂಗಳುಗಳ ಕಾಲ ವಿಳಂಬ ಯಾಕೆ ಮಾಡಲಾಯಿತು ಎಂದು ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಉತ್ತರ ನೀಡಬೇಕು ಎಂದರು .

ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ನಂತರವೇ ಪರೇಶ ಮೇಸ್ತ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ ಆದರೆ ಅಂದಿನಿಂದಲೇ ಆರೋಪಿಗಳನ್ನು ರಕ್ಷಿಸುವ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಲೇ ಬಂದಿದೆ ಎಂದ ಅವರು ಅಂದು ಪರೇಶ ಮೇಸ್ತ ಪ್ರಕರಣದಲ್ಲಿ ಬಿಜೆಪಿ ನಡೆಸಿರುವ ಪ್ರತಿಭಟನೆಗಳನ್ನು ಕಾಂಗ್ರೆಸ್ ಮುಖಂಡರು ದೊಡ್ಡ ಪ್ರಮಾದದಂತೆ ಬಿಂಬಿಸಲು ಹೊರಟಿರುವುದು ಖಂಡಿಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಮುಖಂಡರಿಗೆ ಸವಾಲ್:
ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಕಾಂಗ್ರೆಸ್ ಮುಖಂಡರಿಗೆ ನಾಗರಾಜ ನಾಯಕ , ಕೆಲವು ಸವಾಲುಗಳನ್ನು ಹಾಕಿದ್ದು ಪರೇಶ ಮೇಸ್ತ ಶವ ದೊರೆಯುವ ಎರಡು ದಿನಗಳ ಮೊದಲೇ ಹೊನ್ನಾವರದ ಶೆಟ್ಟಿಕೆರೆ ಸುತ್ತ ಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಯಾಕೆ ಜಮಾವಣೆಗೊಂಡಿದ್ದರು ಎನ್ನುವುದು ತಿಳಿಸಬೇಕಿದೆ, ಶವ ದೊರಕಿದ ಕೆಲವೇ ಕ್ಷಣಗಳಲ್ಲಿ ಅಂದಿನ ಜಿಲ್ಲಾಧಿಕಾರಿ ನಕುಲ್ ಆಗಮಿಸಿ ಇದೊಂದು ಸಹಜ ಸಾವು ಎಂದು ಹೇಳಿಕೆ ನೀಡಿದ್ದು ಯಾಕೆ? ಯಾವುದೇ ಮರಣೋತ್ತರ ಪರೀಕ್ಷೆ ವರದಿಗಳು ಬರದೇ ಜಿಲ್ಲಾಧಿಕಾರಿ ಈ ರೀತಿಯ ಹೇಳಿಕೆ ನೀಡಲು ಅವರ ಮೇಲೆ ಯಾವ ಒತ್ತಡವಿತ್ತು?
ಯಾವುದೇ ಶವ ದೊರಕಿದರೆ ಸ್ಥಳೀಯ ಸರ್ಕಾರಿ ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಬೇಕು, ಸ್ಥಳೀಯವಾಗಿ ಪರಿಣಿತ ವೈದ್ಯರು ಲಭ್ಯ ಇದ್ದರೂ ಮಣಿಪಾಲದಿಂದ ಖಾಸಗಿ ವೈದ್ಯರನ್ನು ಕೆರೆ ತರುವ ಜರೂರತ್ತು ಏನಿತ್ತು ಎಂದು ಸಿದ್ದರಾಮಯ್ಯನವರು ಉತ್ತರಿಸಲಿ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!