ಹೊಸದಿಗಂತ ವರದಿ ಕಲಬುರಗಿ:
ನಗರದ ಶಾರದಾ ಪಿಯು ಕಾಲೇಜಿನಲ್ಲಿ ಬೂತ್ ಸಂಖ್ಯೆ 168ರಲ್ಲಿ ವಿ.ವಿ.ಪ್ಯಾಡ್ ಸ್ಥಗೀತಗೊಂಡ ಕಾರಣ, ಕೆಲ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ನಂತರ ಪರಿಶೀಲಿಸಿದ ನೋಡಲ್ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ, ಮತದಾನಕ್ಕೆ ಅನುವು ಮಾಡಿಕೊಟ್ಟರು.15 ನಿಮಿಷಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಇದೀಗ ಯಾವುದೇ ಸಮಸ್ಯೆ ಇಲ್ಲ. ಸುಸೂತ್ರವಾಗಿ ಮತದಾನ ನಡೆದಿದೆ ಎಂದು ಬೂತ್ ಪಿ.ಆರ್.ಒ ರಾಮುಲು ಮಾಹಿತಿ ನೀಡಿದ್ದಾರೆ.