VIRAL | ಎಕ್ಸ್ ಬಾಯ್‌ಫ್ರೆಂಡ್‌ ಮನೆಗೆ 100 ಪಿಝಾ ಆರ್ಡರ್‌ ಮಾಡಿ‌ ರಿವೇಂಜ್‌ ತೀರಿಸಿಕೊಂಡ ಮಾಜಿ ಗರ್ಲ್‌ಫ್ರೆಂಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಾಜಿ ಪ್ರೇಯಸಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ ಮೇಲೆ ರಿವೇಂಜ್‌ ತೀರಿಸೋದಕ್ಕಾಗಿ ಆತನ ಮನೆ ಅಡ್ರೆಸ್‌ಗೆ ನೂರು ಪಿಝಾ ಆರ್ಡರ್‌ ಮಾಡಿದ್ದಾಳೆ.

ನೂರು ಪಿಝಾ ಆರ್ಡರ್‌ಗೆ ಹಣ ಕೊಡದೇ ಕ್ಯಾಶ್‌ ಆನ್‌ ಡೆಲಿವರಿ ಆಪ್ಷನ್‌ ನೀಡಿದ್ದಾಳೆ. ಇದರಿಂದಾಗಿ ನೂರು ಪಿಝಾದೊಂದಿಗೆ ಡೆಲಿವರಿ ಬಾಯ್‌ ಹುಡುಗನ ಮನೆಗೆ ಬಂದು ಹಣ ನೀಡುವಂತೆ ಕೇಳಿದ್ದಾರೆ. ಇದರಿಂದ ಗರಂ ಆದ ಮಾಜಿ ಪ್ರಿಯಕರ ನಾನು ಆರ್ಡರ್‌ ಮಾಡಿಲ್ಲ ಎಂದು ಹೇಳಿದ್ದಾನೆ.

ಘಟನೆಯೂ ಗುರುಗಾಂವ್‌ನಲ್ಲಿ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.ಯಶ್ ಹಾಗೂ ಆಯುಷಿ ರಾವತ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ನಡುವೆ ಸಣ್ಣ ಪುಟ್ಟ ವಿಷಯಕ್ಕೆ ಮನಸ್ತಾಪವೊಂದು ಮೂಡಿತ್ತು. ಇದೇ ವೇಳೆ ಎಲ್ಲವನ್ನು ಮರೆತು ಪ್ರೀತಿ ಮುಂದುವರಿಸಲು ಆಯುಷಿ ಬಯಸಿದ್ದಳು. ಆದರೆ ಪ್ರಿಯತಮ ಯಶ್ ಸಂಬಂಧ ಮುಂದುವರೆಸಲು ಸಿದ್ಧವಿಲ್ಲದೇ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದನು. ತನ್ನ ಪ್ರೇಮಿ ಕೈ ಕೊಟ್ಟ ಎನ್ನುವ ನೋವು ಆಕೆಯನ್ನು ಕಾಡಿತ್ತು. ಆದರೆ ಆಯುಷಿಗೆ ಮಾತ್ರ ಆ ನೋವಿನಿಂದ ಹೊರ ಬರಲು ಸಾಧ್ಯವಾಗಲಿಲ್ಲ.

ಟೈಮ್ಸ್ ಅಲ್ಗೆಬ್ರಾ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ಫುಡ್ ಡೆಲಿವರಿ ಏಜೆಂಟ್ 100 ಪಿಜ್ಜಾಗಳನ್ನು ತಲುಪಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಆರ್ಡರ್ ಮಾಡಿರುವ ಆ ವ್ಯಕ್ತಿಯನ್ನು ಸಂಪರ್ಕಿಸುತ್ತಿರುವುದನ್ನು ಕಾಣಬಹುದು. ಆದರೆ ಯಶ್ ಡೆಲಿವರಿ ಏಜೆಂಟ್ ನೊಂದಿಗೆ ವಾಗ್ವಾದಕ್ಕೆ ಇಳಿದಿರುವುದನ್ನು ಕಾಣಬಹುದು. ಏನೇ ಆಗಲಿ, ಪ್ರಿಯತಮೆಯ ಸೇಡಿಗೆ ಮಾಜಿ ಗೆಳೆಯನು ಹದಿನೈದು ಸಾವಿರ ರೂಪಾಯಿ ಪಾವತಿಸಬೇಕಾಗಿ ಬಂದಿದೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದು, ಬಳಕೆದಾರರೊಬ್ಬರು, ‘ಇದು ಆಹಾರ ವಿತರಣಾ ಕಂಪನಿಯ ವೇದಿಕೆಯ ಮಾರ್ಕೆಟಿಂಗ್ ಸ್ಟಂಟ್ ‘ ಎಂದಿದ್ದಾರೆ. ಮತ್ತೊಬ್ಬರು, “ಇದು ಬಹುಶಃ ಜಾಹೀರಾತಾಗಿರಬಹುದು, ಇಲ್ಲದಿದ್ದರೆ, ಇದನ್ನು ಯಾರು ಮತ್ತು ಯಾರಿಗಾಗಿ ಆರ್ಡರ್ ಮಾಡಿದ್ದಾರೆಂದು ಯಾರಿಗೆ ಹೇಗೆ ತಿಳಿಯುತ್ತದೆ?. ಇಲ್ಲಿ ಬ್ರ್ಯಾಂಡ್ ಹೆಸರನ್ನು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!