ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಮಾಜಿ ಸಚಿವ ಸಿ.ಟಿ.ರವಿ (C.T.Ravi) ದಂಪತಿ ಭೇಟಿ ನೀಡಿ ಬಾಲರಾಮನ (BalaRama) ದರುಶನವನ್ನು ಪಡೆದಿದ್ದಾರೆ.
ಬಾಲರಾಮನ ದರುಶನದ ಅನುಭವವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ ಅವರು, ಭವ್ಯ ಮಂದಿರದ ಮುಂದೆ ನಿಂತುಕೊಂಡವನಿಗೆ ಮೈಯೆಲ್ಲಾ ರೋಮಾಂಚನ, ಜೀವನ ಪಾವನವಾದ ಭಾವ ಎಂದು ಬರೆದುಕೊಂಡಿದ್ದಾರೆ.
ಅಯೋಧ್ಯಾ ರಾಮ ಜನ್ಮ ಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಹೋರಾಟದ ನೆನಪಾಗಿ ಕಣ್ಣಲ್ಲಿ ನೀರು ತುಂಬಿ ಬಂತು. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿರುವ ಸಂತೋಷಕ್ಕೋ ಅಥವಾ ಮಂದಿರ ನಿರ್ಮಾಣಕ್ಕೆ ತ್ಯಾಗ ಬಲಿದಾನ ಮಾಡಿದ ಲಕ್ಷಾಂತರ ಜನರಿಗಾಗಿ ಮೂಡಿದ ಅಶ್ರುತರ್ಪಣವೋ? ನಾನರಿಯೆ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭವ್ಯ ಮಂದಿರದ ಮುಂದೆ ನಿಂತುಕೊಂಡವನಿಗೆ ಮೈಯೆಲ್ಲಾ ರೋಮಾಂಚನ, ಜೀವನ ಪಾವನವಾದ ಭಾವ. ಅಯೋಧ್ಯಾ ರಾಮ ಜನ್ಮಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಹೋರಾಟದ ನೆನಪಾಗಿ ಒಮ್ಮೆಗೆ ಕಣ್ಣಲ್ಲಿ ನೀರು ತುಂಬಿ ಬಂತು. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿರುವ… pic.twitter.com/0OdBl505sA
— C T Ravi 🇮🇳 ಸಿ ಟಿ ರವಿ (@CTRavi_BJP) February 13, 2024
ಸರಯೂ ತೀರದಲ್ಲಿ ಗುಲಾಮಗಿರಿಯ ಪ್ರತೀಕವಾಗಿ ನಿಂತಿದ್ದ ವಿವಾದಿತ ಕಟ್ಟಡವನ್ನು ಕೆಡವಲು, ರಾಷ್ಟ್ರ ಪುರುಷ ರಾಮನಿಗೆ ಭವ್ಯ ರಾಷ್ಟ್ರ ಮಂದಿರವನ್ನು ಕಟ್ಟಲು ನಡೆಸಿದ ಕರಸೇವೆ, ಜೊತೆಗಿದ್ದ ಕರಸೇವಕರು, ಸರಯೂ ನದಿಯಿಂದ ತಂದ ಮರಳಿನ ರಾಶಿ, ಮೈ ಮೇಲಿದ್ದ ಲಾಠಿಯೇಟಿನ ಬಾಸುಂಡೆಗಳು, ಗುಮ್ಮಟ ಪತನ, ತಾತ್ಕಾಲಿಕ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಹೊತ್ತದ್ದು, ಹುತಾತ್ಮ ಕರಸೇವಕರ ದೇಹಗಳು, ನೋವಿನಿಂದ ನರಳುತ್ತಿದ್ದ ಕರಸೇವಕರು, ಕರಸೇವಕರನ್ನು ಮಕ್ಕಳ ಹಾಗೆ ನೋಡಿಕೊಂಡ ದೇಶದ ಮಾತೆಯರು, ಇವರೆಲ್ಲರೂ ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋದರು. ಇಂದು ಪತ್ನಿಯೊಂದಿಗೆ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಪ್ರಭು ಶ್ರೀರಾಮ ಚಂದ್ರನ ದರ್ಶನ ಮಾಡುವಂತಾಗಿದ್ದು ನನ್ನ ಪಾಲಿನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.