ಬಳ್ಳಾರಿಯಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಮಾಜಿ ಸಚಿವ ಎಂ.ದಿವಾಕರ್ ಬಾಬು ಆಹ್ವಾನ

ಹೊಸದಿಗಂತ ವರದಿ ಬಳ್ಳಾರಿ:

ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು ಗಣಿನಾಡು ಬಳ್ಳಾರಿ ನಗರ ಕ್ಷೇತ್ರದಿಂದಲೇ ಸ್ಪರ್ಧಿಸಲಿ. ಈ ಕುರಿತು ನಾನು ವೈಯಕ್ತಿಕವಾಗಿ ಆಹ್ವಾನ ಮಾಡಿದ್ದು, ಸ್ಥಳೀಯ ಕೆಲ ಹಿರಿಯ ಮುಖಂಡರೊಂದಿಗೆ ಚೆರ್ಚಿಸಿರುವೆ. ಶೀಘ್ರದಲ್ಲೇ ನಿಯೋಗ ತೆರಳಿ ಆಹ್ವಾನಿಸಲಿದ್ದೇವೆ ಎಂದು ಮಾಜಿ ಸಚಿವ ಎಂ.ದಿವಾಕರ್ ಬಾಬು ಹೇಳಿದ್ದಾರೆ.

ನಗರದ ಗಂಗಪ್ಪ ಜಿನ್ ಆವರಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಜನರಿದ್ದು, ಎಲ್ಲರೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ನನಗೂ ಟಿಕೆಟ್ ಫೈನಲ್ ಅಂತ ಹೇಳಲಾಗುತ್ತಿದ್ದರೂ ನಾಯಕ ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರನ್ನು ಆಹ್ವಾನಿಸುತ್ತಿರುವೆ. ದಾಖಲೆ ಮತಗಳ ಅಂತರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಪಕ್ಷದ ಅಗ್ರಗಣ್ಯ ನಾಯಕರು ಕ್ಷೇತ್ರದ ಶಾಸಕರಾದರೇ ಅನುದಾನ ನೀರಿನಂತೆ ಹರಿದು ಬರಲಿದೆ. ಅವಧಿಯಲ್ಲಿ ಬಳ್ಳಾರಿಯ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ ಎನ್ನುವುದು ನನ್ನ ಕನಸು ಎಂದರು.

ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಆಕಾಂಕ್ಷೆಗಳು ಟಿಕೆಟ್ ಕೇಳುವುದು ತಪ್ಪಲ್ಲ, ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟದಲ್ಲಿದ್ದಾರೆ ಎನ್ನುವುದು ತಪ್ಪು. ಸಿದ್ದರಾಮಯ್ಯ ಇಲ್ಲಿಂದ ಶಾಸಕರಾಗಿ ಆಯ್ಕೆಯಾದರೆ, ಅಭಿವೃದ್ಧಿ ಕೆಲಸಗಳಿಗೆ ಮತ್ತಷ್ಟು ವೇಗ ಸಿಗಲಿದೆ. ಅನುದಾನ ನಿರೀಕ್ಷೆ ಮೀರಿ ಹರಿದು ಬರಲಿದೆ. ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರ ಜಲಾಶಯದಿಂದ ಪ್ರತಿ ವರ್ಷ 200 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿದೆ, ಈ ನೀರು ಪೋಲಾಗದಂತೆ ಅಗತ್ಯ ಕ್ರಮಕೈಗೊಂಡರೇ ನಮ್ಮ ರೈತರ ನೀರಾವರಿ ಕ್ಷೇತ್ರ ವಿಸ್ತೀರ್ಣವಾಗಲಿದೆ.

ಸಿದ್ದರಾಮಯ್ಯ ಮತ್ತೆ ಸಿ.ಎಂ.ಆಗಬೇಕು, ಬಳ್ಳಾರಿ ಯಿಂದಲೇ ಸ್ಪರ್ಧಿಸಬೇಕು. ಬಳ್ಳಾರಿಗೂ ಅವರಿಗೂ ಅವಿನಾಭಾವ ಸಂಬಂಧವಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!