ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತದ ಅಂಡರ್-19 ತಂಡದ ಮಾಜಿ ನಾಯಕ ಮತ್ತು ಆರ್‌ಸಿಬಿ ತಂಡದ ಮಾಜಿ ಆಟಗಾರ ಹಾಗೂ 19 ವಯೋಮಿತಿ ತಂಡದ ಮಾಜಿ ನಾಯಕ ವಿಜಯ್ ಜೋಲ್ ಬಂಧನವಾಗಿದೆ.
ಅರ್ಜುನ್ ಖೋಟ್ಕರ್ ಅವರ ಅಳಿಯ ಆಗಿರುವ ಇವರ ಮೇಲೆ ಕ್ರಿಪ್ಟೋಕರೆನ್ಸಿ ವಹಿವಾಟಿನಲ್ಲಿ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿರುವ ಆರೋಪವಿದೆ.
ಈ ಸಂಬಂಧ ಘಾಣಸಂಗಿ ಪೊಲೀಸ್ ಠಾಣೆಯಲ್ಲಿ ಜಾಲ್ನಾದಲ್ಲಿ ಪ್ರಕರಣ ದಾಖಲಾಗಿದೆ. ಈ ವಿಷಯದಲ್ಲಿ ವಿಜಯ್ ಜೋಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಉದ್ಯಮಿ ಕಿರಣ್ ಖಾರತ್ ಮತ್ತು ಅವರ ಪತ್ನಿ ವಿಜಯ್ ಜೋಲ್ ವಿರುದ್ಧ ಪ್ರಕರಣದಲ್ಲಿ ಆರೋಪಿಸಿದ್ದರು. ವಿಜಯ್ ಜೋಲ್ ತನ್ನ ಗೂಂಡಾಗಳನ್ನು ಕಳುಹಿಸಿ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ವಿಜಯ್ ಜೋಲ್ ಹಾಗೂ ಅವರ ಸಹೋದರ ವಿಕ್ರಮ್ ಜೋಲ್ ಜೊತೆಗೆ 15 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ವಿಜಯ್ ಜೋಲ್, ವಿಕ್ರಮ್ ಜೋಲ್ ಸೇರಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.