January17, 2026
Saturday, January 17, 2026
spot_img

ಡ್ರೈವರ್‌ಗಳಿಗೆ ಅತಿಯಾದ ಸ್ಟ್ರೆಸ್‌! 5 ವರ್ಷಗಳಲ್ಲಿ 1097 ಬಿಎಂಟಿಸಿ ಬಸ್‌ಗಳ ಅಪಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಗಳ ಅಪಘಾತಕ್ಕೆ ಹಲವು ಮಂದಿ ಬಲಿಯಾಗಿದ್ದಾರೆ. ಈ ಕಾರಣಕ್ಕಾಗಿ ಬಿಎಂಟಿಸಿಯನ್ನು ಕಿಲ್ಲರ್ ಬಿಎಂಟಿಸಿ ಎಂದು ಕರೆಯಲಾಗುತ್ತಿದೆ. ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯಂದಾಗಿ ಬಿಎಂಟಿಸಿ ಬಸ್‌ಗಳ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ. ಸಾರಿಗೆ ಇಲಾಖೆ ನೀಡುವ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ 1097 ಬಿಎಂಟಿಸಿ ಬಸ್ ಗಳ ಅಪಘಾತ ಸಂಭವಿಸಿದೆ.

ಬಿಎಂಟಿಸಿ ಸಂಸ್ಥೆಯ 1097 ಬಸ್ ಗಳ ಪೈಕಿ 853 ಸಾಮಾನ್ಯ ಬಸ್ ಗಳು ಅಪಘಾತಕ್ಕೊಳಗಾಗಿವೆ. ಇನ್ನು 75 ವೋಲ್ವೋ ಬಸ್ ಗಳು ಐದು ವರ್ಷಗಳಲ್ಲಿ ಅಪಘಾತಕ್ಕಿಡಾಗಿವೆ. ಇನ್ನು ವಿದ್ಯುತ್ ಚಾಲಿತ ಬಸ್ ಗಳ ಸಂಖ್ಯೆ 169. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ 7051 ಬಸ್ ಗಳು ಕಾರ್ಯಾಚರಣೆ ಮಾಡುತ್ತಿವೆ. ಈ ಪೈಕಿ 5361 ಡಿಸೇಲ್ ಬಸ್ ಗಳು ಹಾಗೂ 1690 ವಿದ್ಯುತ್ ಚಾಲಿತ ಬಸ್ ಗಳು ಇವೆ. 2024-25 ನೇ ಸಾಲಿನಲ್ಲಿ ನಾನ್ ಎ ಸಿ ಬಸ್ ಗಳಲ್ಲಿ 38.74 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಎಸಿ ಬಸ್ ಗಳಲ್ಲಿ 1.50 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ. ಒಟ್ಟು ಒಂದು ವರ್ಷದಲ್ಲಿ 40.24 ಲಕ್ಷ ಪ್ರಯಾಣಿಕರು ಬಿಎಂಟಿಸಿಯಲ್ಲಿ ಪ್ರಯಾಣ ಮಾಡಿದ್ದಾರೆ.

ಕಾಲಕಾಲಕ್ಕೆ ಚಾಲಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಹಾಗೂ ವಿದ್ಯುತ್ ಚಾಲಿತ ವಾಹನಗಳ ಚಾಲಕರುಗಳಿಗೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷಾ ಚಾಲನೆ ಹಾಗೂ ಸಂಚಾರ ನಿಯಮ ಪಾಲನೆ ಕುರಿತು ತರಬೇತಿ ನೀಡಲಾಗುತ್ತಿದೆ. ಅಲ್ಲದೆ ವಲಯಮಟ್ಟದಲ್ಲಿ ವಾರದಲ್ಲಿ ಒಂದು ದಿನ ಸುರಕ್ಷಾ ಚಾಲನೆ ಕುರಿತು ಚಾಲನಾ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಸಿಬ್ಬಂದಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಕ್ರೀಡೆ, ಸಾಂಸ್ಕೃತಿಕ ಹಾಗೂ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

Must Read

error: Content is protected !!