₹2,000 ಬದಲಿಸಿಕೊಳ್ಳೋಕೆ ಇಂದಿನಿಂದ ಅವಕಾಶ – ನೀವು ತಿಳಿದಿರಬೇಕಾದ ಮಾಹಿತಿಗಳು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೇ 23ರಿಂದ 2,000 ರುಪಾಯಿಯ ನೋಟುಗಳನ್ನು ಡೆಪಾಸಿಟ್ ಮಾಡುವ ಅವಕಾಶ ಶುರುವಾಗಿದೆ. ಸೆಪ್ಟೆಂಬರ್ 30ರ ವರೆಗೂ ನಿಮ್ಮಲ್ಲಿರುವಂಥ 2,000 ರುಪಾಯಿ ನೋಟುಗಳನ್ನು ಬೇರೆ ಮುಖಬೆಲೆ ನೋಟುಗಳೊಂದಿಗೆ ಬದಲಾಯಿಸಿಕೊಳ್ಳೋ ಅವಕಾಶ ಇರೋದ್ರಿಂದ ಗಾಬರಿ-ಗಡಿಬಿಡಿ ಬೇಕಾಗಿಲ್ಲ ಅಂತ ಆರ್ ಬಿ ಐ ಹೇಳಿದೆ.

₹2,000 ಮುಖಬೆಲೆಯ ಕರೆನ್ಸಿ ಬದಲಾಯಿಸಿಕೊಳ್ಳುವವರು ತಿಳಿದಿರಬೇಕಾದ ಸಂಗತಿಗಳು:

-ಪ್ರತಿದಿನ 10 ಬ್ಯಾಂಕ್ ನೋಟುಗಳನ್ನು ಅಂದರೆ 20 ಸಾವಿರ ರುಪಾಯಿಯವರೆಗೆ ಜಮಾ ಮಾಡಿ ಅದೇ ಮೌಲ್ಯಕ್ಕೆ ಸಮನಾದ ಬೇರೆ ಮುಖಬೆಲೆ ನೋಟುಗಳನ್ನು ಪಡೀಬಹುದು. ಇಷ್ಟು ಮೊತ್ತವನ್ನು ಯಾವುದೇ ಬ್ಯಾಂಕಿನಲ್ಲಿ, ಯಾವ ಐಡಿ ಫ್ರೂಫ್ ಇಲ್ಲದೇ ಪಡೆದುಕೊಳ್ಳಬಹುದು. ಬ್ಯಾಂಕ್ ಅಕೌಂಟ್ ಇಲ್ಲದಿದ್ರೂ ಈ ಲಿಮಿಟ್ ನ ಮೊತ್ತದ ಬದಲಾವಣೆ ಸಾಧ್ಯ.

-ದಿನದಲ್ಲಿ ಇದಕ್ಕಿಂತ ಹೆಚ್ಚಿನ ಮೊತ್ತ ಜಮಾ ಮಾಡಬೇಕು ಅಂತಾದ್ರೆ ಅದಕ್ಕೊಂದು ಫಾರ್ಮ್ ತುಂಬಿ ವಿವರಗಳನ್ನು ನೀಡಬೇಕು ಅಂತ ಆರ್ ಬಿ ಐ ಹೇಳಿದೆ.

-50,000 ರುಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ನೀವು ಯಾವುದೇ ಬ್ಯಾಕಿನಲ್ಲಿ ಜಮಾ ಮಾಡೋಕೆ ಹೊದ್ರೆ ಆಗ ಪಾನ್ ನಂಬರ್ ಕೊಡಬೇಕು ಅನ್ನೋ ನಿಯಮ ಮೊದಲಿನಿಂದಲೂ ಇದೆ. ಹೀಗಾಗಿ ಈ ನಿಟ್ಟಿನಲ್ಲೇನೂ ಹೊಸ ನಿಯಮ ಮಾಡಬೇಕಾದ ಅಗತ್ಯ ಇಲ್ಲ. ಹೀಗಾಗಿ 2 ಸಾವಿರ ರುಪಾಯಿಗಳ ನೋಟಿನ ಬಹಳ ದೊಡ್ಡ ಪ್ರಮಾಣವನ್ನು ಒಮ್ಮೆಲೆ ಜಮಾ ಮಾಡುವುದಕ್ಕೆ ಹೋದರೆ ನಿಮ್ಮ ವಿವರಗಳನ್ನು ಕೊಡಬೇಕಾಗುತ್ತದೆ.

ಜನಸಾಮಾನ್ಯರಿಗೆ ವೃಥಾ ತೊಂದರೆಯಲ್ಲವೇ?

-ಎಲ್ಲರೂ ಗಮನಿಸಿರುವಂತೆ ₹2,000 ಮುಖಬೆಲೆ ನೋಟು ಅದಾಗಲೇ ವಿತರಣೆಯಲ್ಲಿ ಕ್ಷೀಣವಾಗಿತ್ತು. ಎಟಿಎಂ ಸೇರಿದಂತೆ ಮತ್ತಿತ್ತರ ವ್ಯವಹಾರಗಳಲ್ಲಿ ₹2,000 ಕರೆನ್ಸಿ ಸಿಗುತ್ತಿದ್ದದ್ದು ಇತ್ತೀಚಿನ ದಿನಗಳಲ್ಲಿ ಇಲ್ಲವೇ ಇಲ್ಲ ಎಂಬಷ್ಟು ವಿರಳ. ಹೀಗಾಗಿ ಈ ನೋಟಿನ ಬದಲಾವಣೆಗೆ ಜನಸಾಮಾನ್ಯರೆನಿಸಿಕೊಂಡವರು ಸರತಿ ಸಾಲಲ್ಲಿ ನಿಲ್ಲಬೇಕಾದ ಸ್ಥಿತಿ ಇಲ್ಲ.

-ನೋಟು ಅಮಾನ್ಯೀಕರಣವಾದ ಸಂದರ್ಭದಲ್ಲಿ ದೇಶದ ದೊಡ್ಡ ಜನಸಂಖ್ಯೆ ಕರೆನ್ಸಿ ಬದಲಾವಣೆಗೆ ನಿಂತಿತ್ತು. ಆಗ ಕೇವಲ ಚಿಕ್ಕ ಮುಖಬೆಲೆ, ಅಂದರೆ ₹500 ಮಾತ್ರ ನೆಚ್ಚಿಕೊಂಡಿದ್ದರೆ ಎಲ್ಲೆಡೆ ಬ್ಯಾಂಕುಗಳಿಗೆ ಪೂರೈಸಬೇಕಾದ ಕರೆನ್ಸಿ ಪ್ರಮಾಣ ಹೆಚ್ಚುತ್ತಿದ್ದಾದ್ದರಿಂದ, ₹2,000 ಕರೆನ್ಸಿ ಆಗಿನ ತಾತ್ಕಾಲಿಕ ಅಗತ್ಯವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!