ಹರ್ಷ ಹತ್ಯೆ ಖಂಡಿಸಿ ಅಂಕೋಲಾದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಹೊಸ ದಿಗಂತ ವರದಿ, ಅಂಕೋಲಾ:

ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ಅಂಕೋಲಾದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ಧಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹರ್ಷ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತೀಯ ಸಂಘಟನೆಗಳಾದ ಪಿ.ಎಫ್. ಐ , ಎಸ್. ಡಿ.ಪಿ. ಐ ಮೊದಲಾದ ಮತೀಯ ಸಂಘಟನೆಗಳನ್ನು ನಿಷೇದಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪಟ್ಟಣದ ತಹಶೀಲ್ಧಾರ ಕಚೇರಿ ಎದುರು ಸೇರಿದ ಬಿಜೆಪಿ ಕಾರ್ಯಕರ್ತರು ಮೂಲಭೂತವಾದಿ ಸಂಘಟನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ ಮಾತನಾಡಿ ಹಿಂದು ಕಾರ್ಯಕರ್ತ ಹರ್ಷ ಅವರನ್ನು ಮತಾಂದರು ಅಮಾನವೀಯವಾಗಿ ಹತ್ಯೆ ಮಾಡಿರುವುದು ಸಹಿಸಲು ಸಾಧ್ಯವಿಲ್ಲ, ಹಿಂದುಗಳ ಸಹಿಷ್ಣುತೆಯನ್ನು ಅವರ ದೌರ್ಬಲ್ಯವೆಂದು ತಿಳಿದುಕೊಳ್ಳಬೇಡಿ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಭಾಸ್ಕರ ನಾರ್ವೇಕರ್ ಮಾತನಾಡಿ ಹರ್ಷ ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು,ಹತ್ಯೆ ಹಿಂದಿರುವ ವಿಧ್ವಂಸಕಾರಿ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಅವರು ಮಾತನಾಡಿ ಹರ್ಷ ಹತ್ಯೆಯ ಆರೋಪಿಗಳನ್ನು ಬಂಧಿಸಲಾಗಿದ್ದು ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದರು.
ಸರ್ಕಾರ ಯಾವುದೇ ಭೇದ ಭಾವವಿಲ್ಲದೇ ಸರ್ವ ಧರ್ಮದವರನ್ನು ಸಮಾನವಾಗಿ ಕಂಡು ಆಡಳಿತ ನಡೆಸುತ್ತಿರುವಾಗ ಕೆಲವು ಮತಾಂದರು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ನಮ್ಮ ನಾಡಿನಲ್ಲಿ ರಾಮ ರಾಜ್ಯವನ್ನು ಸ್ಥಾಪಿಸುತ್ತೆವೆ ಹೊರತು ಔರಂಗಜೇಬನ ಆಡಳಿತಕ್ಕೆ ಎಂದೂ ಅವಕಾಶ ಮಾಡಿ ಕೊಡುವುದಿಲ್ಲ ಎಂದರು.
ಜಿ.ಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಬಿ.ಜೆ.ಪಿ ಮುಖಂಡ ನಿತ್ಯಾನಂದ ಗಾಂವಕರ್ ಮಾತನಾಡಿದರು.
ಪ್ರಮುಖರುಗಳಾದ ರಾಮಚಂದ್ರ ಹೆಗಡೆ, ಬಿಂದೇಶ ನಾಯಕ, ಚಂದ್ರಕಾಂತ ನಾಯ್ಕ, ಗಣಪತಿ ನಾಯ್ಕ, ಹೂವಾ ಖಂಡೇಕರ್, ವಿಜಯಕುಮಾರ್ ಗಾಂವಕರ್, ನಾಗೇಂದ್ರ ನಾಯ್ಕ, ಕೃಷ್ಣಕುಮಾರ್ ಮಹಾಲೆ, ಸಂದೀಪ ಗಾಂವಕರ್ ಮೊದಲಾದವರು ಪಾಲ್ಗೊಂಡಿದ್ದರು.
ಉಪ ತಹಶೀಲ್ಧಾರ ಗಿರೀಶ್ ಜಾಂಬಾವಳಿಕರ್ ಮನವಿ ಸ್ವೀಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!