ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ 2020ರಲ್ಲಿ ಬದುಕು ಅಂತ್ಯಗೊಳಿಸಿದ ಸುದ್ದಿ ಬಹುತೇಕರನ್ನು ಬೆಚ್ಚಿ ಬೀಳಿಸಿತ್ತು. ನಟನ ಸಾವಿನ ಬೆನ್ನಲ್ಲೇ ಆರೋಪ ಪ್ರತ್ಯಾರೋಪಗಳು ಕೇಳಿಬಂದಿತ್ತು. ಇಷ್ಟೇ ಅಲ್ಲ ಪ್ರಕರಣ ಕೂಡ ದಾಖಲಾಗಿ, ಸಿಬಿಐ ಎಂಟ್ರಿಕೊಟ್ಟು ಕಳೆದ ನಾಲ್ಕು ವರ್ಷ ತನಿಖೆ ನಡೆಸಿ ಇದೀಗ ಸಾವಿನ ಸಮಾಪ್ತಿ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ.
ಈ ವರದಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ ಅನ್ನೋ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದಿದೆ. ನಟನ ಸಾವಿಗೆ ಇತರರು ಪ್ರಚೋದನೆ ನೀಡಿರುವ ಬಗ್ಗೆ, ಒತ್ತಡ ಹಾಕಿರುವ ಬಗ್ಗೆಯೂ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸಿಬಿಐ ಹೇಳಿದೆ.
ಇನ್ನು ಸುಶಾಂತ್ ಸಿಂಗ್ ರಜಪೂತ್ ವ್ಯಾಟ್ಸಾಪ್ ಸಂದೇಶ, ಮೆಸೇಜ್, ಕರೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಅಮೆರಿಕಕ್ಕೆ ಕಳುಹಿಸಿ ಪರೀಕ್ಷಿಸಿದೆ. ಈ ವರದಿಯಲ್ಲೂ ಯಾವುದೇ ಮೆಸೇಜ್ ಡಿಲೀಟ್ ಮಾಡಿರುವುದು, ಎಡಿಟ್ ಮಾಡಿರುವುದು ನಡೆದಿಲ್ಲ ಎಂದಿದೆ.
ಸುಶಾಂತ್ ಸಾವಿನ ಹಿಂದೆ ಪ್ರಭಾವಿಗಳ ಕೈವಾಡವಿದೆ ಅನ್ನೋ ಆರೋಪ, ಅನುಮಾನಕ್ಕೆ ಸಿಬಿಐ ತೆರೆ ಎಳೆದಿದೆ.