March 6, 2026
Friday, March 6, 2026
spot_img

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆಗೆ ಕಸರತ್ತು: ಭಾರತ-ಅಮೆರಿಕ ಸಂಬಂಧಕ್ಕೆ ಮತ್ತಷ್ಟು ಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಇರಾನ್ ಯುದ್ಧದ ಭೀತಿ ಮತ್ತು ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆ, ಭಾರತಕ್ಕೆ ಅಮೆರಿಕ ಸರ್ಕಾರವು ದೊಡ್ಡ ಮಟ್ಟದ ಸಮಾಧಾನಕರ ಸುದ್ದಿ ನೀಡಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ ಅಮೆರಿಕವು 30 ದಿನಗಳ ಕಾಲ ವಿಶೇಷ ವಿನಾಯಿತಿ ನೀಡಿದ್ದು, ಇದರಿಂದ ದೇಶದ ಇಂಧನ ಭದ್ರತೆಗೆ ತಾತ್ಕಾಲಿಕ ಬಲ ಬಂದಂತಾಗಿದೆ.

ಅಮೆರಿಕದ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿಯು (OFAC) ಹೊಸ ಪರವಾನಗಿಯನ್ನು ಹೊರಡಿಸಿದೆ. ಇದರ ಪ್ರಕಾರ, 2026ರ ಮಾರ್ಚ್ 5ರೊಳಗೆ ಹಡಗುಗಳಿಗೆ ಲೋಡ್ ಮಾಡಲಾದ ರಷ್ಯಾದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತವು ಯಾವುದೇ ಅಡೆತಡೆಯಿಲ್ಲದೆ ಆಮದು ಮಾಡಿಕೊಳ್ಳಬಹುದು. ಈ ವಹಿವಾಟುಗಳಿಗೆ 2026ರ ಏಪ್ರಿಲ್ 3ರವರೆಗೆ ಕಾಲಾವಕಾಶ ನೀಡಲಾಗಿದ್ದು, ನಿರ್ಬಂಧಿತ ಹಡಗುಗಳ ಮೂಲಕ ನಡೆಯುವ ವ್ಯವಹಾರಗಳಿಗೂ ಇದು ಅನ್ವಯಿಸಲಿದೆ.

ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಕಳೆದ ನವೆಂಬರ್‌ನಲ್ಲಿ ರಷ್ಯಾದ ಪ್ರಮುಖ ತೈಲ ಕಂಪನಿಗಳಾದ ಲುಕೋಯಿಲ್ ಮತ್ತು ರೋಸ್‌ನೆಫ್ಟ್ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಆದರೆ, ಪ್ರಸ್ತುತ ಇರಾನ್ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಬಹುದಾದ ಅಸ್ಥಿರತೆಯನ್ನು ತಡೆಯಲು ಅಮೆರಿಕ ಈ ಮೃದು ಧೋರಣೆ ತಳೆದಿದೆ. ಕಾರ್ಯದರ್ಶಿ ಬೆಸೆಂಟ್ ಅವರು ಭಾರತವನ್ನು ಅಮೆರಿಕದ “ಅತ್ಯಗತ್ಯ ಪಾಲುದಾರ” ಎಂದು ಕರೆದಿದ್ದು, ದ್ವಿಪಕ್ಷೀಯ ಸಂಬಂಧದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !