September 30, 2026
Wednesday, September 30, 2026
spot_img

ಏರ್ ಪೋರ್ಟ್ ನಲ್ಲಿ ನಮಾಜ್ ಗೆ ಅನುಮತಿ ಕೋರಿ ಅರ್ಜಿ: ಬಾಂಬೆ ಹೈಕೋರ್ಟ್ ಕೊಟ್ಟ ಸೂಚನೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲಿ ಬೇಕಾದರೂ ಪ್ರಾರ್ಥನೆ (ನಮಾಜ್‌) ಮಾಡುವುದು ಧಾರ್ಮಿಕ ಹಕ್ಕು ಎನಿಸಿಕೊಳ್ಳುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ರಂಜಾನ್ ಸಮಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಏರ್ಪೋರ್ಟ್‌ ಬಳಿಯಿರುವ ಖಾಲಿ ಜಾಗದಲ್ಲಿ ನಮಾಜ್‌ ಮಾಡಲು ಅನುಮತಿಸಬೇಕು ಅಥವಾ ಅದಕ್ಕಾಗಿ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಟ್ಯಾಕ್ಸಿ ಮತ್ತು ರಿಕ್ಷಾ ಚಾಲಕರು ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ರಂಜಾನ್ ತಿಂಗಳಲ್ಲಿ ನಮಾಜ್‌ ಕಡ್ಡಾಯವಾದರೂ, ವಿಮಾನ ನಿಲ್ದಾಣದಂತಹ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಸ್ಥಳಗಳಲ್ಲಿ ಧರ್ಮಕ್ಕಿಂದ ಭದ್ರತೆ ಮುಖ್ಯವಾಗುತ್ತದೆ ’ ಎಂದು ಅಭಿಪ್ರಾಯಪಟ್ಟಿದೆ. ಜತೆಗೆ, ‘ಸಮೀಪದಲ್ಲಿರುವ ಮದರಸಾಗಳಲ್ಲಿ ನಮಾಜ್‌ ಮಾಡಿ’ ಎಂದು ಸೂಚಿಸಿದೆ.

Must Read