ಇಂದಿನ ವೇಗದ ಜೀವನಶೈಲಿಯಲ್ಲಿ ಹೆಚ್ಚು ಹಣ ಗಳಿಸುವುದಕ್ಕಿಂತ ಅದನ್ನು ಸಮರ್ಪಕವಾಗಿ ನಿರ್ವಹಿಸುವುದು ಹೆಚ್ಚು ಮುಖ್ಯ. ಆಧುನಿಕ ಉದ್ಯೋಗಿಗಳಲ್ಲಿ, ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಲ್ಲಿ, ದುಂದು ಖರ್ಚಿನ ಪ್ರವೃತ್ತಿ ಹೆಚ್ಚಾಗಿರುವುದು ಕಾಣಸಿಗುತ್ತದೆ. ತಿಂಗಳ ಅಂತ್ಯದ ವೇಳೆಗೆ ಖರ್ಚುಗಳನ್ನು ನಿರ್ವಹಿಸಲು ಸಂಕಷ್ಟವಾಗುವ ಪರಿಸ್ಥಿತಿಯೂ ಕಂಡುಬರುತ್ತದೆ. ಇದನ್ನು ತಡೆಗಟ್ಟಲು ಹಾಗೂ ಭವಿಷ್ಯದ ಹಣಕಾಸು ಸುರಕ್ಷತೆಯತ್ತ ಹೆಜ್ಜೆ ಇಡಲು ಕೆಲವು ಸರಳ ಆದರೆ ಪರಿಣಾಮಕಾರಿ ಹಣಕಾಸು ತಂತ್ರಗಳನ್ನು ಅನುಸರಿಸುವುದು ಅತ್ಯಗತ್ಯ.
ಪ್ರತಿಯೊಬ್ಬರೂ ತಮ್ಮ ಆದಾಯದಿಂದ ಒಂದು ನಿರ್ದಿಷ್ಟ ಮೊತ್ತವನ್ನು ಉಳಿತಾಯವಾಗಿ ಮೀಸಲಿಡಬೇಕು. ಇದಕ್ಕಾಗಿ ಬಾಡಿಗೆ, ಆಹಾರ, ಪ್ರಯಾಣ ಮತ್ತು ಇತರ ಅಗತ್ಯ ವೆಚ್ಚಗಳನ್ನು ಸರಿಯಾಗಿ ವರ್ಗೀಕರಿಸುವುದು ಮುಖ್ಯವಾಗಿದೆ. ಈ ಕ್ರಿಯೆಗೆ ಹಣಕಾಸು ಯೋಜನೆಯ ಮೂಲತತ್ವಗಳ ಅರ್ಥವಾಗಬೇಕು.
50-30-20 ನಿಯಮ ಪಾಲಿಸಿ: ಹಣಕಾಸು ತಜ್ಞರು ಶಿಫಾರಸು ಮಾಡುವಂತೆ, “50-30-20” ನಿಯಮ ಅನ್ವಯಿಸಬೇಕು. ಎಂದರೆ, ಆದಾಯದ 50 ಪ್ರತಿಶತವನ್ನು ಮಾಸಿಕ ನಿತ್ಯದ ಖರ್ಚಿಗೆ, 30 ಪ್ರತಿಶತವನ್ನು ವೈಯಕ್ತಿಕ ಅಗತ್ಯಗಳಿಗೆ ಹಾಗೂ ಉಳಿದ 20 ಪ್ರತಿಶತವನ್ನು ಉಳಿತಾಯ ಹಾಗೂ ಹೂಡಿಕೆಗೆ ಮೀಸಲಿಡಬೇಕು. ಈ ತಂತ್ರವನ್ನು ಅನುಸರಿಸುವ ಮೂಲಕ ತೀರ್ಮಾನಿತ ವೆಚ್ಚಕ್ಕೆ ಮೀರಿ ಖರ್ಚುಮಾಡುವುದನ್ನು ತಡೆಯಬಹುದು.
ಖರ್ಚು ದಾಖಲಿಸುವ ಅಭ್ಯಾಸ ಬೆಳೆಸಿ: ಹೆಚ್ಚಿನ ಸಂದರ್ಭಗಳಲ್ಲಿ ನಗದು ಬಳಕೆಯಿಂದ ಮಾಡಿದ ಖರ್ಚುಗಳು ಸರಿಯಾಗಿ ನೆನಪಿಗೆ ಬರವುದಿಲ್ಲ. ಹಣ ಎಲ್ಲಿ ಹೋಗಿದೆಯೆಂಬುದು ತಿಳಿಯುವುದು ಕಷ್ಟವಾಗುತ್ತದೆ. ಆದ್ದರಿಂದ, ಖರ್ಚುಗಳನ್ನು ಲಿಖಿತವಾಗಿ ದಾಖಲಿಸುವ ಅಭ್ಯಾಸ ಬೆಳೆಸಬೇಕು. ಖರ್ಚು ಮಾಡಿದ ತಕ್ಷಣವೇ ಆ ಮಾಹಿತಿಯನ್ನು ನೋಂದಾಯಿಸುವುದರಿಂದ, ದಿನದ ಕೊನೆಗೆ ಅಥವಾ ತಿಂಗಳ ಅಂತ್ಯಕ್ಕೆ ನಿಮ್ಮ ಹಣ ಹೇಗೆ ಹೋದೆಯೆಂಬ ವಿವರ ಸಿಗುತ್ತದೆ.
ಆನ್‌ಲೈನ್ ಟೂಲ್ ಅಥವಾ UPI ಬಳಸಿ ವೆಚ್ಚ ವಿಶ್ಲೇಷಣೆ ಮಾಡಿ: UPI ತಂತ್ರಜ್ಞಾನ ಬಂದ ನಂತರ ನಗದು ಬಳಕೆಯು ಕಡಿಮೆಯಾದರೂ, ವೆಚ್ಚದ ಹದವನ್ನು ತಿಳಿದುಕೊಳ್ಳಲು ಈ ಪಧ್ಧತಿ ಬಹುಪಾಲು ಸಹಾಯ ಮಾಡುತ್ತದೆ. ಹಲವಾರು ಆಪ್‌ಗಳು ಇನ್ಫೋಗ್ರಾಫಿಕ್ಸ್ ಮೂಲಕ ಪ್ರತಿದಿನದ ಖರ್ಚನ್ನು ವಿಶ್ಲೇಷಣೆಯ ರೂಪದಲ್ಲಿ ನೀಡುತ್ತವೆ. ಇದು ನಿಮ್ಮ ಖರ್ಚಿನ ಬೆಳವಣಿಗೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಎರಡು ವಿಭಿನ್ನ ಬ್ಯಾಂಕ್ ಖಾತೆ ಇಡಿ: ಉಳಿತಾಯದ ದೃಷ್ಟಿಯಿಂದ ಎರಡು ಬೇರೆ ಬ್ಯಾಂಕ್ ಖಾತೆಗಳನ್ನೂ ಹೊಂದಿರುವುದು ಉತ್ತಮ. ಒಂದು ಖಾತೆಯನ್ನು ಖರ್ಚಿಗೆ ಬಳಸಿಕೊಳ್ಳಬೇಕು, ಇನ್ನೊಂದನ್ನು ಉಳಿತಾಯ ಅಥವಾ ಹೂಡಿಕೆಗೆ ಮೀಸಲಿಡಬೇಕು. ಸಂಬಳ ಬರುವುದು ಖಾತೆಗೆ ಆಗುತ್ತವೆ ಎಂಬ ಕಾರಣದಿಂದ, ಹೂಡಿಕೆಗಾಗಿ ಅನುಪಾತದ ಮೊತ್ತವನ್ನು ಮತ್ತೊಂದು ಖಾತೆಗೆ ತಕ್ಷಣವೇ ವರ್ಗಾಯಿಸುವುದರಿಂದ ಹಣ ಉಳಿಯುವ ಸಾಧ್ಯತೆ ಹೆಚ್ಚುತ್ತದೆ.
SIP ಅಥವಾ ಮುಚ್ಚಿದ ಉಳಿತಾಯ ಯೋಜನೆಗಳನ್ನು ಅನುಸರಿಸಿ: SIP ಅಥವಾ ಇತರ ಹೂಡಿಕೆ ಯೋಜನೆಗಳಿಗೋಸ್ಕರ, ಅವುಗಳ ಅವಧಿ ಮುಗಿಯುವ ಮೊದಲು ಬೇಕಾದ ಹಣವನ್ನು ಖಾತೆಗೆ ಹಾಕುವುದು ಸುರಕ್ಷಿತ ಮಾರ್ಗವಾಗಿದೆ. ಉಳಿದ ಹಣವನ್ನು ಖರ್ಚಿಗೆ ಬಳಸಬಹುದು. ಹೀಗಾಗಿ, ಎರಡು ಖಾತೆಗಳ ನಡುವಿನ ಸಮತೋಲನದೊಂದಿಗೆ ಸಂಪೂರ್ಣ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸಬಹುದು.
ಈ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಆಧಾರಿತವಾಗಿದ್ದು, ಯಾವುದೇ ಹೂಡಿಕೆ ಅಥವಾ ಹಣಕಾಸು ನಿರ್ಧಾರಕ್ಕೆ ಮುನ್ನ ತಜ್ಞರ ವೈಯಕ್ತಿಕ ಸಲಹೆ ಪಡೆಯುವುದು ಉತ್ತಮ.