ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಮನೆ ಎದುರು ಸ್ಫೋಟ ಸಂಭವಿಸಿದೆ. ಕಾಲಿಯಾ ಸುರಕ್ಷಿತವಾಗಿದ್ದಾರೆ. ಘಟನೆಯ ನಂತರ ಪೊಲೀಸ್ ತಂಡಗಳು ಕಾಲಿಯಾ ಅವರ ನಿವಾಸಕ್ಕೆ ಧಾವಿಸಿವೆ. ಸ್ಫೋಟದ ಸ್ಥಳದಿಂದ ವಿಧಿವಿಜ್ಞಾನ ತಜ್ಞರು ಸಹ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಅಪರಾಧಿಯನ್ನು ಗುರುತಿಸಲು ತನಿಖೆ ಆರಂಭಿಸಲಾಗಿದೆ.
ಮಧ್ಯರಾತ್ರಿ 1 ಗಮಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಮನೆಯವರೆಲ್ಲರೂ ಮಲಗಿದ್ದರು, ಸ್ಫೋಟ ಸಂಭವಿಸಿದಾಗ ಮೊದಲು ಸಿಡಿಲು ಎಂದುಕೊಂಡೆ ಬಳಿಕ ಸ್ಫೋಟ ಎಂದು ತಿಳಿಯಿತು ಎಂದು ಕಾಲಿಯಾ ಹೇಳಿದ್ದಾರೆ.