ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಸೀದಿಯಲ್ಲಿ ಜಿಲೆಟಿನ್ ಸ್ಟಿಕ್‌ಗಳಿಂದ ಸ್ಫೋಟವೊಂದು ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಮಸೀದಿಯ ಒಳಭಾಗಕ್ಕೆ ಹಾನಿಯಾಗಿದೆ.
ಇನ್ನು ರಂಜಾನ್ ಮುನ್ನಾ ದಿನವೇ ಈ ಘಟನೆ ಸಂಭವಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ವ್ಯಕ್ತಿಯೊಬ್ಬ ಮಸೀದಿಯ ಹಿಂಭಾಗದಿಂದ ಪ್ರವೇಶಿಸಿ ಜಿಲೆಟಿನ್ ಸ್ಟಿಕ್‌ಗಳನ್ನು ಇಟ್ಟಿದ್ದು, ಅದು ಸ್ಫೋಟಗೊಂಡಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು. ಬಂಧಿತ ಆರೋಪಿಗಳನ್ನು ವಿಜಯ್ ರಾಮಾ ಗವ್ಹಾನೆ (22) ಮತ್ತು ಶ್ರೀರಾಮ್ ಅಶೋಕ್ ಸಾಗ್ದೆ (24) ಎಂದು ಗುರುತಿಸಲಾಗಿದೆ.
ಪ್ರಸ್ತುತ, ತನಿಖೆ ಮುಂದುವರಿದಿದ್ದು, ಈ ಘಟನೆಯ ಹಿಂದಿನ ಉದ್ದೇಶ ಮತ್ತು ಸಂಪೂರ್ಣ ವಿವರಗಳು ಶೀಘ್ರದಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.