ಗುರಿ ತಲುಪಿದ ಎಕ್ಸ್‌ಪೋಸ್ಯಾಟ್‌ ಉಪಗ್ರಹ: ಖುಷಿ ಹಂಚಿಕೊಂಡ ಇಸ್ರೋ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ ಸಿ-58 ತನ್ನ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಸ್ಯಾಟಲೈಟ್‌ಅನ್ನು ಬಾಹ್ಯಾಕಾಶಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಹೇಳಿದೆ.

ಪಿಎಸ್‌ಎಲ್‌ವಿ-ಸಿ58 ಉಡಾವಣಾ ವಾಹನದಲ್ಲಿದ್ದ ಕ್ಯಾಮೆರಾಗಳು ಎಕ್ಸಪೋಸ್ಯಾಟ್‌ ಉಪಗ್ರಹ ಬಾಹ್ಯಾಕಾಶದಲ್ಲಿ ಬೇರ್ಪಡುವ ವಿಡಿಯೋವನ್ನು ಸೆರೆಹಿಡಿದ್ದು, ಇಸ್ರೋ ಇದನ್ನು ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪ್ರಕಟಿಸುವ ಮೂಲಕ ಸ್ಯಾಟಲೈಟ್‌ ಈಗ ನಿಗದಿತ ಗುರಿ ಮುಟ್ಟಿದೆ ಎಂದು ಹೇಳಿದೆ.

ಇಸ್ರೋ ವಿಶ್ವದ ಎರಡನೇ ಮತ್ತು ದೇಶದ ಮೊದಲ ಇಂಥ ಉಪಗ್ರಹವನ್ನು ಉಡಾವಣೆ ಮಾಡಿದೆ, ಇದು ಪಲ್ಸರ್‌ಗಳು, ಕಪ್ಪು ಕುಳಿಗಳು, ಗೆಲಾಕ್ಸಿಗಳು ಮತ್ತು ವಿಕಿರಣ ಇತ್ಯಾದಿಗಳನ್ನು ಅಧ್ಯಯನ ಮಾಡುತ್ತದೆ. ಇದರ ಹೆಸರು ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ (XPoSat). ಇದರೊಂದಿಗೆ ಇತರ 10 ಪೇಲೋಡ್‌ಗಳನ್ನು ಸಹ ಕಳುಹಿಸಿಕೊಟ್ಟಿದೆ.

ಈ ಉಪಗ್ರಹದ ಜೀವಿತಾವಧಿ ಐದು ವರ್ಷಗಳು. PSLV-C58 ಅನ್ನು ಇಂದು ಬೆಳಗ್ಗೆ 9:10 ಕ್ಕೆ ಉಡಾವಣೆ ಮಾಡಲಾಯಿತು. ಇದು ಪಿಎಸ್ ಎಲ್ ವಿ ರಾಕೆಟ್ ಸರಣಿಯ 60ನೇ ಉಡಾವಣೆಯಾಗಿದೆ. XPoSat ಉಡಾವಣೆಗೆ ಒಂದು ದಿನ ಮೊದಲು, ವಿಜ್ಞಾನಿಗಳು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿದ್ದರು.

ಈ ಉಪಗ್ರಹವು ಬಾಹ್ಯಾಕಾಶದಲ್ಲಿ ಸಂಭವಿಸುವ ವಿಕಿರಣವನ್ನು ಅಧ್ಯಯನ ಮಾಡುತ್ತದೆ. ಅವುಗಳ ಮೂಲಗಳ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ ಅಳವಡಿಸಲಾಗಿರುವ ದೂರದರ್ಶಕವನ್ನು ರಾಮನ್ ಸಂಶೋಧನಾ ಸಂಸ್ಥೆ ತಯಾರಿಸಿದೆ. ಈ ಉಪಗ್ರಹವು ಬ್ರಹ್ಮಾಂಡದ 50 ಪ್ರಕಾಶಮಾನವಾದ ಮೂಲಗಳನ್ನು ಅಧ್ಯಯನ ಮಾಡುತ್ತದೆ. ಹಾಗೆ- ಪಲ್ಸರ್, ಬ್ಲ್ಯಾಕ್ ಹೋಲ್ ಎಕ್ಸ್-ರೇ ಬೈನರಿ, ಆಕ್ಟಿವ್ ಗ್ಯಾಲಕ್ಟಿಕ್ ನ್ಯೂಕ್ಲಿಯಸ್, ನಾನ್ ಥರ್ಮಲ್ ಸೂಪರ್ನೋವಾ. ಉಪಗ್ರಹವನ್ನು 650 ಕಿ.ಮೀ ಎತ್ತರದಲ್ಲಿ ನಿಯೋಜಿಸಲಾಗುತ್ತದೆ ಎಂದು ಇಸ್ರೋ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!