ಸಾಮಾನ್ಯವಾಗಿ ಲ್ಯುಕೇಮಿಯಾ, ಬ್ರೆಸ್ಟ್ ಅಥವಾ ಲಂಗ್ ಕ್ಯಾನ್ಸರ್ ಬಗ್ಗೆ ಬಹುಪಾಲು ಜನರಿಗೆ ಮಾಹಿತಿ ಇರುತ್ತದೆ. ಆದರೆ ಕಣ್ಣಿನ ಕ್ಯಾನ್ಸರ್ ಎಂಬುದು ಬಹುಪಾಲು ಜನರಿಗೆ ಅಪರಿಚಿತವಾಗಿರುತ್ತದೆ. ದುರಂತವೆಂದರೆ, ಇದು ಸಹ ಗಂಭೀರ ಕ್ಯಾನ್ಸರ್‌ಗಳ ಪೈಕಿ ಒಂದು. ತಡವಾಗಿ ಪತ್ತೆಹಚ್ಚಿದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ಇದರ ಬಗ್ಗೆ ಜಾಗೃತಿ ಅಗತ್ಯ.
ಕಣ್ಣಿನ ಕ್ಯಾನ್ಸರ್‌ನಲ್ಲಿ ಹಲವಾರು ವಿಧಗಳಿದ್ದು, ಇವುಗಳಲ್ಲಿ ಕಣ್ಣಿನ ಅಥವಾ ಐರಿಸ್‌ನ ಬಣ್ಣದ ಭಾಗದಲ್ಲಿ ಬೆಳೆಯುವ ಐರಿಸ್ ಮೆಲನೋಮ, ನಿಮ್ಮ ಕಣ್ಣಿನ ಮಸೂರಗಳಲ್ಲಿ ಬೆಳೆಯುವ ಸಿಲಿಯರಿ ಬಾಡಿ ಮೆಲನೋಮ, ಮತ್ತು ನಿಮ್ಮ ಕಣ್ಣಿನ ಪದರದಲ್ಲಿ ರೂಪುಗೊಳ್ಳುವ ಕೊರೊಯ್ಡಲ್ ಮೆಲನೋಮ ಸೇರಿವೆ.
ಕಣ್ಣಿನಲ್ಲಿ ಬದಲಾವಣೆಗಳು ಕಂಡುಬರಬಹುದು:
ಕಣ್ಣಿನ ಬಣ್ಣ, ಪ್ಯೂಪಿಲ್ ಗಾತ್ರದಲ್ಲಿ ಬದಲಾವಣೆ, ಕಣ್ಣಿನಲ್ಲಿ ಕಪ್ಪು ಛಾಯೆ ಅಥವಾ ಬೆಂಕಿಯಂತೆ ಹಳದಿ ಛಾಯೆ ಗೋಚರಿಸುವುದು ಮೊದಲ ಸೂಚನೆ ಆಗಿರಬಹುದು.
ದೃಷ್ಟಿ ಕೊರತೆಯಾಗಬಹುದು:
ಕಣ್ಣಿನ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ದೃಷ್ಟಿ ಮಂಜಾಗುವಂತಹ ಅನುಭವವಾಗಬಹುದು. ಎರಡು ರೀತಿಯ ಚಿತ್ರಗಳು ಕಾಣುವುದು, ನಿಗದಿತ ಸೈಡ್‌ಗೆ ದೃಷ್ಟಿ ಕಡಿಮೆಯಾಗುವುದು ಕಂಡುಬರುತ್ತದೆ.
ಕಣ್ಣಿನಲ್ಲಿ ನೋವು ಅಥವಾ ಉಬ್ಬು:
ಕಣ್ಣುಗಳಲ್ಲಿ ಸಹಜವಲ್ಲದ ನೋವು, ಉಬ್ಬು ಅಥವಾ ಇನ್ಫೆಕ್ಷನ್ ಕಾಣಿಸಿಕೊಳ್ಳುವುದು ಕೂಡ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಕೆಲವೊಮ್ಮೆ ಇದನ್ನು ಸಾಮಾನ್ಯ ಕಣ್ಣು ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬಹುದು.
ಕಣ್ಣಿನ ಚರ್ಮದ ಮೇಲೆ ಗಡ್ಡೆ
ಕಣ್ಣಿನ ಚರ್ಮದ ಮೇಲೆ ಹೊಸ ಗಡ್ಡೆ, ಅಥವಾ ಕಪ್ಪು ಕಲೆ ಉಂಟಾದರೆ, ಅದು ಮೆಲನೋಮಾ ಎಂಬ ಚರ್ಮದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು, ಇದು ಕಣ್ಣಿನ ಭಾಗಕ್ಕೂ ಪಸರಿಸಬಹುದು.
ತಡೆಗಟ್ಟುವುದು ಹೇಗೆ?
ನಿಮ್ಮ ಕಣ್ಣುಗಳ ಶುಚಿತ್ವ ಮತ್ತು ಸುರಕ್ಷತೆಯನ್ನು ಯಾವಾಗಲೂ ಕಾಪಾಡಿಕೊಳ್ಳಿ.
ನೇರ ಸೂರ್ಯನ ಬೆಳಕಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ.
ಧೂಳು ಮತ್ತು ವಾಯು ಮಾಲಿನ್ಯಕ್ಕೆ ದೀರ್ಘಕಾಲದ ವರೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.
ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಕೊಳ್ಳಿ.
ನಿಮ್ಮ ಕಣ್ಣುಗಳಲ್ಲಿ ಯಾವುದೇ ರೀತಿಯ ಅಸ್ವಸ್ಥತೆ ಕಂಡು ಬಂದರೆ ಕಣ್ಣಿನ ಪರೀಕ್ಷೆ ಮಾಡಿಸಿ.
ಕಣ್ಣಿನ ಕ್ಯಾನ್ಸರ್ ಬಗ್ಗೆ ತಕ್ಷಣ ತಿಳಿದುಕೊಂಡು ಚಿಕಿತ್ಸೆ ಪಡೆಯುವುದು ತುಂಬಾ ಮುಖ್ಯ. ವರ್ಷಕ್ಕೊಮ್ಮೆ ದೃಷ್ಟಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಕ್ರಮ. ತೊಂದರೆ ಅಥವಾ ಬದಲಾವಣೆಗಳಿದ್ದರೆ ತಕ್ಷಣಲೇ ನೇತ್ರ ತಜ್ಞರನ್ನು ಸಂಪರ್ಕಿಸಿ. ಕಣ್ಣೂ ಜೀವಕ್ಕೂ ಮುಖ್ಯ! (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)