ಕೆಲವೊಮ್ಮೆ ನಿಮ್ಮ ದೈನಂದಿನ ಕಂಪ್ಯೂಟರ್, ಲ್ಯಾಪ್‌ಟಾಪ್, ದೂರದರ್ಶನ ಅಥವಾ ಸೆಲ್ ಫೋನ್ ಅಭ್ಯಾಸಗಳು ಕಣ್ಣಿನ ಕಿರಿಕಿರಿಯನ್ನು ಉಂಟುಮಾಡಬಹುದು. ಉರಿ ಕಣ್ಣುಗಳನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ಬಳಸಿ.
ಗರಿಕೆಯನ್ನು ಪೇಸ್ಟ್ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆ ಮೇಲೆ ಅಳವಡಿಸಿ 1 ಗಂಟೆ ಬಿಟ್ಟು ತೊಳೆದರೆ ಕಣ್ಣು ಉರಿ ನಿವಾರಣೆಯಾಗುತ್ತದೆ.
ನುಗ್ಗೆ ಸೊಪ್ಪನ್ನು ಅರೆದು ಸೋಸಿ ಆ ರಸವನ್ನು ರೆಪ್ಪೆಗಳ ಮೇಲೆ ಹಚ್ಚಿದರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.
ನೆಲ್ಲಿಕಾಯಿ ಪುಡಿಯನ್ನು ತುಪ್ಪ ಮತ್ತು ಬೆಚ್ಚಗಿನ ನೀರಿಗೆ ಬೆರೆಸಿ ಪ್ರತಿದಿನ ಸಂಜೆ ಕುಡಿಯುವುದರಿಂದ ಕಣ್ಣಿನ ಕಿರಿಕಿರಿಯು ನಿವಾರಣೆಯಾಗುತ್ತದೆ.
ಹೆಸರು ಕಾಳಿನ ಪುಡಿಯನ್ನು ನೀರಲ್ಲಿ ಕಲಸಿ ಮುಖ ಮತ್ತು ರೆಪ್ಪೆಗೆ ಲೇಪ ಮಾಡಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.