ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಮಹಿಳೆಯನ್ನು ಹೊಡೆದು ಕೊಂದು ಆಕೆಯ ಕಣ್ಣುಗಳನ್ನು ಕಿತ್ತು, ನಾಲಗೆಯನ್ನು ಹರಿದು ಭೀಕರವಾಗಿ ಕೊಲೆ ಮಾಡಲಾಗಿದೆ.
ಜಮೀನಿನ ವಿವಾದದಿಂದಾಗಿ ಸುಲೇಖಾ ದೇವಿ ಎನ್ನುವವನ್ನು ನಾಲ್ವರು ದುಷ್ಕರ್ಮಿಗಳು ಟಾರ್ಗೆಟ್ ಮಾಡಿದ್ದರು. ಖಗಾರಿಯಾ ಜಿಲ್ಲೆಯ ತಮ್ಮ ಜಮೀನಿನಲ್ಲಿ ಸುಲೇಖಾ ಕೆಲಸ ಮಾಡುವ ವೇಳೆ ದುಷ್ಕರ್ಮಿಗಳು ಆಗಮಿಸಿದ್ದು, ಸುಲೇಖಾರನ್ನು ಹೊಡೆದು ಕೊಂದಿದ್ದಾರೆ.
ನಂತರ ಚಾಕುವಿನಿಂದ ಕಣ್ಣು ಕಿತ್ತು, ನಾಲಗೆ ಕತ್ತರಿಸಿ ಖಾಸಗಿ ಅಂಗಗಳನ್ನು ವಿರೂಪ ಮಾಡಿದ್ದಾರೆ. ಪರಾರಿಯಾದ ಅಪರಾಧಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಶೀಘ್ರವೇ ಬಂಧಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.