Eyes on the game, not the noise ಎಂದ್ರು ಶುಭ್‌ಮನ್‌ ಗಿಲ್‌! ವಿರಾಟ್‌ ಜೊತೆ ಆಯ್ತಾ ಕಿರಿಕ್‌?

ಹ‌ೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್ 2025 ರಲ್ಲಿ ಬುಧವಾರ ನಡೆದ 14 ನೇ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು.

ಈ ಮ್ಯಾಚ್‌ ಗೆದ್ದ ನಂತರ ಗುಜರಾತ್‌ ಕ್ಯಾಪ್ಟನ್‌ ಶುಭ್‌ಮನ್‌ ಗಿಲ್‌ Eyes on the game, not the noise ಎಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ವಿರಾಟ್‌ ಫ್ಯಾನ್ಸ್‌ ಗರಂ ಆಗಿದ್ದು, ಇಬ್ಬರ ಮಧ್ಯೆ ಬಿರುಕು ಮೂಡಿದ್ಯಾ ಎಂದು ಆಲೋಚಿಸ್ತಿದ್ದಾರೆ.

ಭುವಿ ಶುಭ್​ಮನ್ ಅವರನ್ನು ಔಟ್ ಮಾಡಿದಾಗ, ವಿರಾಟ್ ಕೊಹ್ಲಿ ಸಂಭ್ರಮಾಚರಣೆ ಮಾಮೂಲಾಗಿ ಇರಲಿಲ್ಲ. ಹಿಂದಿಗಿಂತ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಇದೀಗ ಪಂದ್ಯದ ನಂತರ ಶುಭ್​ಮನ್ ಗಿಲ್ ಟ್ವೀಟ್ ಮಾಡಿದ್ದು, ಇದು ಕೋಲಾಹಲವನ್ನು ಸೃಷ್ಟಿಸಿದೆ. ವಾಸ್ತವವಾಗಿ, ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಗೆದ್ದ ನಂತರ ಶುಭ್​ಮನ್ ಗಿಲ್ ತಮ್ಮ ಅಧಿಕೃತ ಎಕ್ಸ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಇಡೀ ಜಿಟಿ ತಂಡದೊಂದಿಗಿನ ಫೋಟೋವನ್ನು ಹಂಚಿಕೊಂಡ ಅವರು, ‘ಗಮನ ಆಟದ ಮೇಲಿದೆ, ಶಬ್ದದ ಮೇಲಲ್ಲ’ ಎಂದು ಶೀರ್ಷಿಕೆ ನೀಡಿದ್ದಾರೆ. ಗಿಲ್ ಔಟಾದಾಗ ಕೊಹ್ಲಿ ಭರ್ಜರಿಯಾಗಿ ಆಚರಿಸಿದ್ದರಿಂದ ಗಿಲ್ ವಿರಾಟ್ ಕೊಹ್ಲಿಯನ್ನು ಕೆಣಕಿದ್ದಾರೆ ಎಂದು ಅನೇಕ ಬಳಕೆದಾರರು ಹೇಳುತ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!