ಫೇಲ್ಡ್‌ ಮ್ಯಾರೇಜ್‌ ಅಂದ್ರೆ ಲೈಫ್‌ ಮುಗಿದು ಹೋಯ್ತು ಅಂತ ಅರ್ಥ ಅಲ್ಲ: ಸುಪ್ರೀಂಕೋರ್ಟ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮದುವೆ ವಿಫಲವಾದರೆ ಅದೇ ಜೀವನದ ಅಂತ್ಯವಲ್ಲ, ಧೈರ್ಯವಾಗಿ ಹೆಜ್ಜೆ ಇಡಿ ಎಂದು ಸುಪ್ರೀಂಕೋರ್ಟ್​ ದಂಪತಿಗೆ ಕಿವಿಮಾತು ಹೇಳಿದೆ.

ಪ್ರೀತಿ ಹುಟ್ಟಲು ನಾನಾ ಕಾರಣಗಳಿರುತ್ತವೆ ಹಾಗೆಯೇ ಅದು ಅಂತ್ಯಗೊಳ್ಳಲು ಅದಕ್ಕಿಂತ ಹೆಚ್ಚು ಕಾರಣಗಳಿರುತ್ತವೆ, ಕೆಲವರು ಸಹಿಸಿಕೊಂಡು ಜೀವನ ಪೂರ್ತಿ ಜತೆಗಿರುವ ನಿರ್ಧಾರ ಮಾಡುತ್ತಾರೆ ಇನ್ನೂ ಕೆಲವರಿಗೆ ಇಗೋ ಹರ್ಟ್​ ಆಗಿ ದೂರ ದೂರವಾಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಕೇವಲ ಅರೇಂಜ್ ಮದುವೆಗಳು ಮಾತ್ರವಲ್ಲದೆ ಪ್ರೀತಿಸಿ ಮದುವೆಯಾದ ಜೋಡಿಗಳು ಕೂಡ ವಿಚ್ಛೇದನದ ಹಂತಕ್ಕೆ ಹೋಗುತ್ತಾರೆ. ಮದುವೆ ವಿಫಲವಾಗಿದೆ ಎಂಬ ಮಾತ್ರ ಜೀವನವೇ ಮುಗಿದಿದೆ ಎಂದರ್ಥವಲ್ಲ, ಧೈರ್ಯವಾಗಿ ಮುನ್ನುಗ್ಗಿ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ನ್ಯಾಯಮೂರ್ತಿ ಅಭಯ್ ಓಕಾ ನೇತೃತ್ವದ ನ್ಯಾಯಪೀಠವು ಮೇ 2020 ರಲ್ಲಿ ನಡೆದ ವಿವಾಹವನ್ನು ವಿಸರ್ಜಿಸಿ, ದಂಪತಿ ಪರಸ್ಪರ ಸಲ್ಲಿಸಿದ್ದ ಎಲ್ಲಾ 17 ವಿಚಾರಣೆಗಳನ್ನು ರದ್ದುಗೊಳಿಸಿತು ಮತ್ತು ಮುಂದುವರೆಯಲು ಸಲಹೆ ನೀಡಿತು. ದಂಪತಿ ಇಬ್ಬರಿಗೂ ಚಿಕ್ಕ ವಯಸ್ಸು, ಅವರು ತಮ್ಮ ಭವಿಷ್ಯದ ಬಗ್ಗೆ ಆಲೋಚಿಸಬೇಕು. ಮದುವೆ ವಿಫಲವಾದರೆ ಅದು ಇಬ್ಬರ ಜೀವನ ಕೊನೆಯಲ್ಲ, ಹೊಸ ಜೀವನವನ್ನು ಶುರು ಮಾಡಬೇಕು. ಹಾಗೆಯೇ ಇಬ್ಬರೂ ಕೂಡ ಶಾಂತಿಯುತವಾಗಿ ವರ್ತಿಸಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here