ಹೊಸದಿಗಂತ ಕಲಬುರಗಿ
ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಅಪರಿಚಿತ ವ್ಯಕ್ತಿಯ ಮೂಲಕ ಹುಸಿ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ, ತಕ್ಷಣವೇ ನಗರದ ಸ್ಟೇಷನ್ ಬಜಾರ್ ಪೋಲಿಸ್ ಠಾಣೆ ಪೋಲಿಸರು ಹಾಗೂ ಬಾಂಬ್ ಸ್ಕ್ವಾಡ್,ಡಾಗ್ ನಿಂದ ರೈಲ್ವೆ ನಿಲ್ದಾಣ ತಪಾಸಣೆ ಮಾಡಲಾಯಿತು.
ಅಪರಿಚಿತ ವ್ಯಕ್ತಿಯಿಂದ ಬೆಂಗಳೂರಿನ ೧೧೨ಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಹೇಳಿಕೆ ನೀಡಿದ ತಕ್ಷಣವೇ, ಬೆಂಗಳೂರಿನ ೧೧೨ ಪೋಲಿಸ್ ಅಧಿಕಾರಿಗಳು ಕಲಬುರಗಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಜಾಗೃತಗೊಂಡ ಸ್ಟೇಷನ್ ಬಜಾರ್ ಪೋಲಿಸರು ಸರ್ವ ಸನ್ನದ್ಧ ತಂಡದೊಂದಿಗೆ ಕಲಬುರಗಿ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದು, ತಪಾಸಣೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಬೆಳಕಿಗೆ ಬಂದಿದೆ.
ಇದೀಗ ಹುಸಿ ಬಾಂಬ್ ಬೆದರಿಕೆಯ ಕರೆ ಮಾಡಿದ ವ್ಯಕ್ತಿಗಾಗಿ ಪೋಲಿಸರಿಂದ ಶೋಧ ಕಾರ್ಯ ನಡೆದಿದೆ.