ಖೋಟಾ ನೋಟು ಚಲಾವಣೆ ಆರೋಪ: ಖತರ್ನಾಕ್ ಗ್ಯಾಂಗ್ ನ ಹೆಡೆಮುರಿ ಕಟ್ಟಿದ ಖಾಕಿ

ಹೊಸದಿಗಂತ ರಾಯಚೂರು :

ಜಿಲ್ಲೆಯ ಮಾನವಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಹತ್ತು ಜನರುಳ್ಳ ಖತರ್ನಾಕ ತಂಡವನ್ನು ಮಾನವಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂದಿತರನ್ನು ಮಾನವಿ ತಾಲೂಕಿನ ಚಹಪುಡಿ ಕ್ಯಾಂಪ್ ಸೀಕಲ್‌ನ ವಿರುಪಾಕ್ಷಿ ಕಬ್ಬೇರ ಹಾಗೂ ತಂಡದ ಚಹಪುಡಿ ಕ್ಯಾಂಪ್ ಸೀಕಲ್‌ನ ಶೇಖರ ಕೊತ್ತದೊಡ್ಡಿ, ಶಾಸ್ತ್ರೀ ಕ್ಯಾಂಪ್‌ನ ಹುಸೇನ್ ಬಾಷಾ, ಮಾಚನೂರು ಗ್ರಾಮದ ಖಾಜಾ ಹುಸೇನ್, ಜಿಲ್ಲೆಯ ಸಿರವಾರದ ಸಿದ್ದನಗೌಡ @ ಕೀರ್ತಿಗೌಡ, ಗುಡ್ಡೇರಾಯನ ಕ್ಯಾಂಪ್ ಛಾಗಬಾವಿಯ ಅಮರೇಶ ಪೀವನ್, ಮಾನವಿಯ ಅಜ್ಮೀರ್, ಸಿಂಧನೂರಿನ ಆಲಂ ಬಾಷಾ, ರಾಯಚೂರಿನ ನರಸಯ್ಯ ಶೆಟ್ಟಿ ಹಾಗೂ ಕಾರಟಗಿಯ ಭೀಮೇಶ ಎಂದು ಗುರುತಿಸಲಾಗಿದೆ.

ಘಟನೆ ವಿವರ
ಮಾನವಿ ತಾಲೂಕಿನ ಚಹಪುಡಿ ಕ್ಯಾಂಪ್ ಸೀಕಲ್‌ನ ವಿರುಪಾಕ್ಷಿ ಕಬ್ಬೇರ ಎನ್ನುವ ವ್ಯಕ್ತಿ ಮಾನವಿಯ ಇಂಡಿಯನ್ ಬ್ಯಾಂಕ್‌ದಲ್ಲಿ ಮೇ.೧೨ ರಂದು ಐದನೂರು ಮುಖ ಬೆಲೆಯ (೩೬ ನೋಟುಗಳನ್ನು) ೧೮ ಸಾವಿರ ರೂಗಳನ್ನು ಎಟಿಎಂ ಯಂತ್ರದಲ್ಲಿ ಹಾಕಿ ತನ್ನ ಖಾತೆಗೆ ಜಮಾವಣೆ ಮಾಡಿದ್ದಾನೆ. ಅದೇ ದಿನ ಬ್ಯಾಂಕ್‌ಗೆ ತೆರಳಿ ತನ್ನ ಖಾತೆಗೆ ಹಣ ಜಮೆ ಆಗಿದೆಯೋ ಇಲ್ಲವೋ ಎನ್ನುವುದನ್ನು ವಿಚಾರಿಸಿದ್ದಾನೆ. ಅಂದು ಜಮೆ ಆಗಿಲ್ಲ ಎಂದು ತಿಳಿದ ವಿರುಪಾಕ್ಷಿ ಮಾರನೇ ದಿನ ಬ್ಯಾಂಕ್‌ಗೆ ತೆರಳಿ ಬ್ಯಾಂಕ್ ಮ್ಯಾನೇಜರ ಅವರನ್ನು ವಿಚಾರಿಸಿದ್ದಾನೆ.
ಮರುದಿನ ಹಣ ಜಮೆ ಆಗಿಲ್ಲದಿರುವುದನ್ನು ಗಮನಿಸಿದ ಮ್ಯಾನೇಜರ ಎಟಿಎಂ ಯಂತ್ರವನ್ನು ಪರಿಶೀಲನೆ ಮಾಡಿದ್ದಾರೆ. ಆಗ ವಿರುಪಾಕ್ಷಿ ಜಮೆ ಮಾಡಿದ್ದು ಅಸಲಿ ನೋಟುಗಳಲ್ಲಿ ಅವು ನಲಕಿ ಎಂದು ಅವನ ಅಸಲಿ ಬಣ್ಣ ಬಯಲಾಗಿದೆ.

ಬ್ಯಾಂಕ್ ಮ್ಯಾನೇಜರ್ ಎಟಿಎಂ ಯಂತ್ರದಲ್ಲಿ ಖೋಟಾ ನೋಟು ಇರುವ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಪೊಲೀಸರು ವಿರುಪಾಕ್ಷಿಯ ವಿವರಗಳನ್ನು ಪಡೆದು ಕಾರ್ಯಾಷರಣೆಗೆ ಇಳಿದಿದ್ದಾರೆ. ಆಗ ಖೋಟಾ ನೋಟು ಚಲಾವಣೆಯ ಹಿಂದಿದ್ದ ಹತ್ತು ಮಿಕಗಳು ಪೊಲೀಸರ ಬಲೆಗೆ ಬಿದ್ದಿವೆ.
ಎಟಿಎಂ ಯಂತ್ರದಲ್ಲಿ ಜಮೆ ಮಾಡಿದ್ದ ೧೮ ಸಾವಿರ ಹಣ ಮತ್ತು ಬಂಧಿತರಿAದ ೫೦೦ ಮುಖ ಬೆಲೆಯ ೧೮ ಸಾವಿರ ರೂಗಳು, ಒಂದು ಕಾರು, ನಾಲ್ಕು ಬೈಕ್ ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ ಇದು ಎರಡನೇ ದೊಡ್ಡ ಭೇಟೆ
ಕಳೆದ ಕೆಲ ತಿಂಗಳುಗಳ ಹಿಂದೆ ರಾಯಚೂರು ನಗರದಲ್ಲಿ ಖೋಟಾ ನೋಟು ಮುದ್ರಣಕ್ಕೆ ಬೇಕಾದ ಯಂತ್ರಗಳು, ಹಾಳೆಗಳು ಸೇರಿದಂತೆ ಇತರೆ ವಸ್ತುಗಳಲ್ಲದೇ ಹಲವರನ್ನು ಬಂಧಿಸಲಾಗಿತ್ತು. ಆ ಘಟನೆ ಜನತೆಯ ಮನಸ್ಸಿನಿಂದ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಖೋಟಾ ನೋಟು ಚಲಾವಣೆಯ ದೊಡ್ಡ ಜಾಲ ಪತ್ತೆ ಆಗಿರುವುದು ಜನತೆಯಲ್ಲಿ ಆತಂಕವನ್ನುಟು ಮಾಡಿದೆ.

ರಾಯಚೂರು ನಗರವಲ್ಲದೆ ಗ್ರಾಮೀಣ ಭಾಗಗಳಲ್ಲಿ ಐನೂರು ಮುಖ ಬೆಲೆಯ ನೋಟುಗಳಲ್ಲದೇ ಎರಡನೂರು ಮುಖ ಬೆಲೆಯು ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆ ಕುರಿತು ಹೊಸದಿಗಂತ ಮೊದಲ ಬಾರಿಗೆ ಬೆಳಕು ಚಲ್ಲಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕಾರ್ಯಾಚರಣೆ ತಂಡದಲ್ಲಿ ಪಿಐ ಸೋಮಶೇಖರ ಕೆಂಚರಡ್ಡಿ, ಸಿಬ್ಬಂಧಿಗಳಾದ ಹುಸೇನ್‌ಸಾಬ್, ವೆಂಕಟೇಶ, ಆಂಜನೇಯ, ಕೆ.ಸೂಗಪ್ಪ, ಬಸವರಾಜ, ಡೆವಿಡ್, ರೆಹಮಾನ್, ಬಂದೇಜವಾಜ್ ಅವರನ್ನೊಳಗೊಂಡ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ.ಎಂ., ಎಎಸ್‌ಪಿ ಜಿ.ಹರೀಶ್ ಹಾಗೂ ಡಿವಾಯ್‌ಎಸ್ಪಿ ಬಿ.ಎಸ್.ತಳವಾರ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!