‘ಆಪರೇಷನ್ ಬ್ರಹ್ಮ’ದಲ್ಲಿ ನಕಲಿ ಜಿಪಿಎಸ್ ಸಂಕೇತ: ಇದರ ಹಿಂದಿದ್ಯಾ ಚೀನಾ ಕೈವಾಡ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯಾನ್ಮಾರ್‌ನಲ್ಲಿ ಭೂಕಂಪದ ನಂತರ ಅಲ್ಲಿನ ಜನರಿಗೆ ಸಹಾಯ ಮಾಡಲು ಆಪರೇಷನ್ ಬ್ರಹ್ಮ ಕಾರ್ಯಾಚರಣೆಯನ್ನು ಭಾರತೀಯ ವಾಯುಪಡೆ ಪ್ರಾರಂಭಿಸಿತ್ತು.

ಆದರೆ ಕೆಲವು ಶಕ್ತಿಗಳು ಭಾರತದ ಈ ಕಾರ್ಯಾಚರಣೆಯನ್ನು ವಿಫಲಗೊಳಿಸಲು ಯತ್ನಿಸಿದ್ದು, ವಾಯುಪಡೆಯ ವಿಮಾನಗಳು ಮ್ಯಾನ್ಮಾರ್‌ಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸುವಾಗ, ಅವುಗಳಿಗೆ ಜಿಪಿಎಸ್ ಮಿಸ್ ಆಗುವಂತೆ ಮಾಡಿದೆ. ಇದು ಒಂದು ರೀತಿಯ ಸೈಬರ್ ದಾಳಿಯಾಗಿದ್ದು, ಇದರಲ್ಲಿ ನಕಲಿ ಜಿಪಿಎಸ್ ಸಂಕೇತಗಳನ್ನು ಕಳುಹಿಸುವ ಮೂಲಕ ವಿಮಾನ ಅಥವಾ ವಾಹನವನ್ನು ತಪ್ಪು ದಿಕ್ಕಿನಲ್ಲಿ ಚಲಿಸುವಂತೆ ನಿರ್ದೇಶಿಸಲು ಪ್ರಯತ್ನಿಸಲಾಗುತ್ತದೆ.

ಕಾರ್ಯಾಚರಣೆಯನ್ನು ವಿಫಲಗೊಳಿಸಲು ಚೀನಾ ಪ್ರಯತ್ನಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಸೈಬರ್ ದಾಳಿಯು ಮ್ಯಾನ್ಮಾರ್‌ಗೆ ಕಳುಹಿಸಲಾದ ಎಲ್ಲಾ ಆರು ಭಾರತೀಯ ವಾಯುಪಡೆಯ ವಿಮಾನಗಳ ಮೇಲೆ ಪರಿಣಾಮ ಬೀರಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಮೂಲಗಳ ಪ್ರಕಾರ, ಈ ವಿಮಾನಗಳಲ್ಲಿ ಹೆಚ್ಚಿನವು ಜಿಪಿಎಸ್ ವಂಚನೆಯ ಸಮಸ್ಯೆಯನ್ನು ವರದಿ ಮಾಡಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!