March 25, 2026
Wednesday, March 25, 2026
spot_img

ಲೋನ್‌ ಕೊಡಿಸ್ತೀನಿ ಬನ್ನಿ ಎಂದು ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದ ನಕಲಿ ಪತ್ರಕರ್ತ ಅರೆಸ್ಟ್‌

ಹೊಸದಿಗಂತ ವರದಿ ಹಾವೇರಿ:

PMEGP ಯಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿದ ನಕಲಿ ಪತ್ರಕರ್ತನೋರ್ವ ಅತ್ಯಾಚಾರ ನಡೆಸಿ ನಂತರ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ‌

ದೀಪಕ್ ಉಪಳೆ ಬಂಧಿತ ನಕಲಿ ಪತ್ರಕರ್ತ. 5ಲಕ್ಷ ರೂಪಾಯಿ ‌ಲೋನ್ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, ಮಹಿಳೆಯನ್ನು ಆಕೆಯನ್ನ ಪುಸಲಾಯಿಸಿ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.

ಲಾಡ್ಜ್ ಗಳು ಸೇರಿದಂತೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ನಡೆಸಿದ್ದಾನೆ. ನಿರಂತರ ಲೈಂಗಿಕ ಸಂಪರ್ಕದಲ್ಲಿರುವಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದು, ಇಲ್ಲದಿದ್ದಲ್ಲಿ ವಿಡಿಯೋ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದರಿಂದ ಬೇಸತ್ತ ಮಹಿಳೆ ನಕಲಿ ಪತ್ರಕರ್ತನ ವಿರುದ್ದ ಹಾವೇರಿ ಜಿಲ್ಲೆ ಬಂಕಾಪೂರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೂರು ಆಧರಿಸಿ ನಕಲಿ ಪತ್ರಕರ್ತ ಬಂಕಾಪೂರ ಪೊಲೀಸರು ಬಂಧಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !