ಸೋನು ನಿಗಮ್‌ ಹೆಸರಿನಲ್ಲಿ ಫೇಕ್‌ ಟ್ವಿಟರ್‌ ಖಾತೆ, ಪ್ಲೀಸ್‌ ಬ್ಲಾಕ್‌ ಮಾಡಿ ಎಂದ ಗಾಯಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಖ್ಯಾತ ಗಾಯಕ ಸೋನು ನಿಗಮ್‌ ಹೆಸರಿನಲ್ಲಿ ಟ್ವಿಟರ್‌ ಖಾತೆಯೊಂದು ಓಪನ್‌ ಆಗಿದೆ. ಖಾತೆಯಲ್ಲಿ ಭಿನ್ನ ಭಿನ್ನವಾದ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. ಆದರೆ ನಾನು ಟ್ವಿಟರ್‌ಗೆ ಬಂದು ಎಂಟು ವರ್ಷಗಳಾಗಿದೆ ಎಂದು ಸೋನು ನಿಗಮ್‌ ಹೇಳಿಕೊಂಡಿದ್ದಾರೆ.

‘ಆನ್​ಲೈನ್​​ನಲ್ಲಿ ನನ್ನ ಐಡೆಂಟಿಟಿಯನ್ನು ಯಾರೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ತಂಡದವರು ಯಾವುದೇ ಕಾರಣಕ್ಕೂ ಯಾರನ್ನೂ ಸಂಪರ್ಕಿಸಿಲ್ಲ. ನನ್ನ ಹೆಸರಲ್ಲಿ ಯಾವುದಾದರೂ ಫೇಕ್ ಖಾತೆ ಕಂಡರೆ ಅದನ್ನು ರಿಪೋರ್ಟ್ ಮಾಡಿ ಮತ್ತು ಬ್ಲಾಕ್ ಮಾಡಿ’ ಎಂದು ಸೋನು ನಿಗಮ್ ಕೋರಿದ್ದಾರೆ.

ನಾನು ಟ್ವಿಟರ್​ನ ಕಳೆದ 8 ವರ್ಷಗಳಿಂದ ಬಳಸುತ್ತಿಲ್ಲ. ಆದಾಗ್ಯೂ ನನ್ನ ಹೆಸರಲ್ಲಿ ಕೆಲವರು ಖಾತೆ ಮಾಡಿಕೊಂಡಿದ್ದಾರೆ. ವಿವಾದಾತ್ಮಕ ವಿಚಾರಗಳನ್ನು ಅದರಲ್ಲಿ ಪೋಸ್ಟ್ ಮಾಡುವ ಕೆಲಸ ಮಾಡುತ್ತಾ ಇದ್ದಾರೆ’ ಎಂದು ಅವರು ಆತಂಕ ಹೊರಹಾಕಿದ್ದಾರೆ.

‘ಈ ವಿಚಾರವನ್ನು ನನ್ನ ಗಮನಕ್ಕೆ ತಂದ ಎಲ್ಲರಿಗೂ ಧನ್ಯವಾದ. ನನ್ನನ್ನು ಅರ್ಥೈಸಿಕೊಂಡ ನಿಮಗೆ ಧನ್ಯವಾದ’ ಎಂದು ಹೇಳಿದ್ದಾರೆ ಅವರು. ಇದನ್ನು ಸೋನು ನಿಗಮ್ ಅವರ ಅಭಿಮಾನಿಗಳು ಮತ್ತಷ್ಟು ಶೇರ್ ಮಾಡಿಕೊಳ್ಳುತ್ತಾ ಇದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!