ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಲಾಕ್ಡೌನ್ ನಿಂದಾಗಿ 2022ರಲ್ಲಿ ಉತ್ಪಾದನಾ ಕೊರತೆ ಅನುಭವಿಸಿದ್ದ ಟೆಕ್ ದಿಗ್ಗಜ ಆ್ಯಪಲ್ ಇದೀಗ ಮತ್ತೊಮ್ಮೆ ನಷ್ಟದ ಸುಳಿಗೆ ಕಾಲಿಟ್ಟಿದೆ. 2023ರಲ್ಲಿ ಆಪಲ್ ಶೇರುಗಳು 4 ಶೇಕಡಾ ಕುಸಿದಿವೆ.
ಮಂಗಳವಾರದ ಮಾರಾಟದಲ್ಲಿ ಆ್ಯಪಲ್ ಪನಿಯ ಶೇರುಗಳು ಕುಸಿದಿದ್ದು ಒಟ್ಟಾರೆ 85 ಮಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಈ ಕುಸಿತದಿಂದಾಗಿ ಮಾರುಕಟ್ಟೆಯಲ್ಲಿ ಆ್ಯಪಲ್ 2 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯಕ್ಕಿಂತ ಕೆಳಮಟ್ಟವನ್ನು ತಲುಪಿದೆ ಎಂದು ಬಿಸ್ನೆಸ್ ಇನ್ ಸೈಡರ್ ವರದಿ ಮಾಡಿದೆ.
2020ರ ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಆ್ಯಪಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದವು. ವರ್ಕ್ ಫ್ರಂ ಹೋಮ್ ಗಳಿಂದಾಗಿ ಆ್ಯಪಲ್ ಲ್ಯಾಪ್ಟಾಪ್ ಗಳ ಮಾರಾಟವು ಏರಿಕೆಯಾಗಿತ್ತು. ಇದರಿಂದ ಆ್ಯಪಲ್ ಶೇರುಗಳು ಏರಿಕೆಯಾಗಿ ಕಂಪನಿಯ ಮಾರುಕಟ್ಟೆ ಮೌಲ್ಯಮಾಪನವು 3 ಟ್ರಿಲಿಯನ್ ಡಾಲರ್ ಮಟ್ಟವನ್ನು ತಲುಪಿತ್ತು. ಆದರೆ 2022ರಲ್ಲಿ ಆ್ಯಪಲ್ ಉತ್ಪನ್ನಗಳ ಬೇಡಿಕೆ ಕುಸಿದಿದೆ. ವಿಶೇಷವಾಗಿ ಮ್ಯಾಕ್ ಬುಕ್, ಏರ್ಪಾಡ್ ಮತ್ತು ಆ್ಯಪಲ್ ವಾಚ್ ಗಳ ಬೇಡಿಕೆ ಗಣನೀಯವಾಗಿ ಕುಸಿದಿದೆ ಎಂದು ಕೆಲ ವರದಿಗಳು ಸೂಚಿಸಿವೆ. ಇದರಿಂದಾಗಿ ದಿನೇ ದಿನೇ ಆ್ಯಪಲ್ ಮಾರುಕಟ್ಟೆ ಮೌಲ್ಯವು ಕಡಿಮೆಯಾಗುತ್ತಿದ್ದು ಮಂಗಳವಾರದ ವಹಿವಾಟಿನಲ್ಲಿ 2 ಟ್ರಿಲಿಯನ್ ಡಾಲರ್ ಗಿಂತಲೂ ಕೆಳಮಟ್ಟಕ್ಕೆ ತಲುಪಿದೆ.