ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿವೃದ್ಧಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಐಎಎಸ್ ಕಚೇರಿಗೆ ಮನವಿ ಮಾಡಿದರು. ಪಾಟ್ನಾದ ಮೆರೈನ್ ಡ್ರೈವ್ ಎಂದೂ ಕರೆಯಲ್ಪಡುವ ಜೆಪಿ ಗಂಗಾ ಮಾರ್ಗದ 3 ನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ.
ಐಎಎಸ್ ಅಧಿಕಾರಿಯೊಂದಿಗೆ ಮಾತನಾಡುವಾಗ ನಿತೀಶ್ ಕುಮಾರ್ ಅವರು ಕಂಗನ್ ಘಾಟ್‌ನಿಂದ ಅಶೋಕ್ ರಾಜ್‌ಪಥ್‌ಗೆ ಸಂಪರ್ಕ ರಸ್ತೆಯನ್ನು ಪ್ರಸ್ತಾಪಿಸಿದರು. ಯೋಜನೆ ಪೂರ್ಣಗೊಳಿಸುವಂತೆ ಕೋರಿದರು.
“ಕಹಿಯೇ ತೋ ಹಮ್ ಆಪ್ಕಾ ಪೇರ್ ಛು ಲೇತೆ ಹೈಂ” ಎಂದು ನಿತೀಶ್ ಕುಮಾರ್ ಅಧಿಕಾರಿಗೆ ಮನವಿ ಮಾಡಿದ್ದಾರೆ.
ನಿತೀಶ್ ಕುಮಾರ್ ಅವರೊಂದಿಗೆ ವಿಧಾನಸಭೆ ಸ್ಪೀಕರ್ ನಂದ್ ಕಿಶೋರ್ ಯಾದವ್ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳಾದ ವಿನಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಕೂಡ ಇದ್ದರು.
“ನಿರ್ಮಾಣ ಪೂರ್ಣಗೊಂಡ ನಂತರ ಜನರು ಪಾಟ್ನಾಗೆ ಪ್ರಯಾಣಿಸಲು ಇದು ತುಂಬಾ ಸಹಾಯಕವಾಗಿದೆ. ಇದು ಜನರ ಸಮಯವನ್ನು ಉಳಿಸುತ್ತದೆ ಮತ್ತು ಉತ್ತರ ಭಾಗದಿಂದ ಬರುವವರಿಗೆ ಅನುಕೂಲವಾಗುತ್ತದೆ” ಎಂದು ನಿತೀಶ್ ಕುಮಾರ್ ಹೇಳಿದರು.